ನಾಳೆಯಿಂದ ನಾಲ್ಕು ದಿನ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ

ಮೈಸೂರು: ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನ.26ರಿಂದ 29ರ ವರೆಗೆ ಮೈಸೂರು- ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ನ.26ರ ಮಧ್ಯಾಹ್ನ 12ಗಂಟೆಗೆ ಮೈಸೂರಿಗೆ ಆಗಮಿಸಿ ಜಂತಗಳ್ಳಿಯ ಲಕ್ಷ್ಮೀ, ಬಸವೇಶ್ವರ ಹಾಗೂ ಸಿದ್ದಪ್ಪಾಜಿ ದೇವಾಲಯ ಉದ್ಘಾಟಿಸುವರು. ಮಧ್ಯಾಹ್ನ ೨ಕ್ಕೆ ಆಯರಹಲ್ಳಿಯ ಮಾರಮ್ಮ ದೇವಾಲಯ ಉದ್ಘಾಟನೆ, ಸಂಜೆ 4 ಗಂಟೆಗೆ ಮೈಸೂರಿನ ನಿವಾಸದಲ್ಲಿ ಎಚ್.ಡಿ.ಕೋಟೆ ಕುರುಬರ ಸಮುದಾಯ ಮುಖಂಡರ ಜತೆ ಸಭೆ, ಸಂಜೆ ೭ಕ್ಕೆ ಹೋಟೆಲ್ ಜೆಪಿ ಫಾರ್ಚೂನ್ ಹೋಟೆಲ್‌ನಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

ನ.27ರ ಬೆಳಿಗ್ಗೆ 11.30ಕ್ಕೆ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆವ ಮಾಜಿ ಮೇಯರ್ ನಾರಾಯಣ್ ಅವರ ಪೌರಬಂಧು ಆತ್ಮಚರಿತ್ರೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ಗಾಯತ್ರಿಪುರಂನ ಬಾಬೂ ಜಗಜೀವನರಾಂ ಸಾಂಸ್ಕೃತಿಕ ಮತ್ತು ಸಮುದಾಯ ಭವನ ಉದ್ಘಾಟಿಸುವರು. ನ.28ರ ಬೆಳಿಗ್ಗೆ 10ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಚಿತ್ರದುರ್ಗಕ್ಕೆ ತೆರಳುವರು. ಸಂಜೆ ೪ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡುವರು. ನ.29ರ ಬೆಳಿಗ್ಗೆ 10ಕ್ಕೆ ಚಾಮರಾಜನಗರಕ್ಕೆ ತೆರಳಿ 11.30ಕ್ಕೆ ನಿಗದಿಯಾಗಿರುವ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸುವರು. ಸಂಜೆ 4.30ಕ್ಕೆ ಮೈಸೂರಿಗೆ ಆಗಮಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ 8.30ಕ್ಕೆ ಬೆಂಗಳೂರಿಗೆ ತೆರಳುವರು.

× Chat with us