ಮಂಡ್ಯ: ದೇವಾಲಯದ ಬೀಗ ಮುರಿದು ಶಿವಲಿಂಗ ಕಳವು

ಮಂಡ್ಯ: ಇಲ್ಲಿನ ಹಲ್ಲೇಗೆರೆ ಗ್ರಾಮದ ಕಾಶಿ ವಿಶ್ವನಾಥ ದೇವಾಲಯದ ಬೀಗ ಮುರಿದು ಶಿವಲಿಂಗ ಕಳವು ಮಾಡಿರುವ ಘಟನೆ ನಡೆದಿದೆ.

ಕಳ್ಳರು ರಾತ್ರಿ ವೇಳೆ ದೇವಾಲಯದ ಬೀಗ ಮುರಿದು ಗರ್ಭ ಗುಡಿಯಲ್ಲಿದ್ದ ಶಿವಲಿಂಗ ಕಳವು ಮಾಡಿದ್ದಾರೆ. ಬೆಳಗ್ಗೆ ಅರ್ಚಕರು ಪೂಜೆ ಮಾಡಲು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ.

ಈ ದೇವಾಲಯಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಕಾಶಿಯಿಂದ ಶಿವಲಿಂಗವನ್ನು ತಂದು ಈ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು ಎನ್ನಲಾಗಿದೆ.

× Chat with us