ಕೋವಿಡ್‌ ಲಸಿಕೆ ಮೊದಲ ಡೋಸ್‌ ಪಡೆದ ಕ್ರಿಕೆಟಿಗ ಶಿಖರ್‌ ಧವನ್

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ಶಿಖರ್‌ ಧವನ್‌ ಗುರುವಾರ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡರು.

ಲಸಿಕೆ ಪಡೆಯುವ ಫೋಟೊವನ್ನು ಹಂಚಿಕೊಂಡಿರುವ ಅವರು, ʻಕೋವಿಡ್‌ ಸಾಂಕ್ರಾಮಿಕ ಉಲ್ಬಣಿಸುತ್ತಿರುವ ಈ ಹಂತದಲ್ಲಿ ಅದನ್ನು ಮಣಿಸಲು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದʼ ಎಂದು ಪೋಸ್ಟ್‌ ಮಾಡಿದ್ದಾರೆ.

ಕೋವಿಡ್‌ ಲಸಿಕೆ ಪಡೆದ ಟೀಂ ಇಂಡಿಯಾ ತಂಡದ ಮೊದಲ ಆಟಗಾರ ಶಿಖರ್‌ ಧವನ್‌ ಆಗಿದ್ದಾರೆ.

× Chat with us