ಉಡುಪಿ : ನಾಡಿನ ಖ್ಯಾತ ಲೇಖಕ ವಿಮರ್ಶಕ ಹಾಗೂ ಹೋರಾಟಗಾರ ಜಿ. ರಾಜಶೇಖರ್ ಅವರು ಅನಾರೋಗ್ಯದಿಂದ ಇಂದು ರಾತ್ರಿ ನಿಧನ ಹೊಂದಿದ್ದಾರೆ.
ವಿಮರ್ಶಕ ರಾಜಶೇಖರ್ ಅವರು ಉಡುಪಿಯ ಕೊಳಂಬೆಯ ಗ್ರಾಮದ ನಿವಾಸಿಯಾಗಿದ್ದು ಇವರು ಪಾರ್ಕಿಂಸನ್ ಪ್ಲಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಶ್ವಾಸಕೋಶದ ಸಮಸ್ಯೆಯಿಂದಲೂ ಕೂಡ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ರಾಜಶೇಖರ್ ಅವರು ನೊಂದವರ ಹಾಗೂ ಕೋಮುವಾದದ ವಿರುದ್ಧ ಸಾಕಷ್ಟು ಜನರಿಗೆ ಧ್ವನಿಯಾಗಿದ್ದಲ್ಲದೆ ಹೋರಾಟಳಲ್ಲಿ ಸದಾ ಮುಂದಿರುತ್ತಿದ್ದರು. ತಮ್ಮ ನೇರ ಮಾತು ಹಾಗೂ ವಿಶ್ಲೇಷಣೆಗಳಿಂದಲೇ ಎಲ್ಲೆಡೆ ಹೆಸರುವಾಸಿಯಾಗಿದ್ದರು. ಮೃತ ರಾಜಶೇಖರ್ ಅವರಿಗೆ ಪತ್ನಿ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಳಗವನು ಆಗಲಿದ್ದಾರೆ.
ಮೃತ ರಾಜಶೇಖರ್ ಅವರ ಪಾರ್ಥಿವ ಶರೀರವನ್ನು ಉಡುಪಿ ಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದ್ದು, ನಾಳೆ ಬೆಳಿಗ್ಗೆ (ಗುರುವಾರ 21 ಜುಲೈ) ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.