ಮೈಸೂರು: ಜೂಜಾಡುತ್ತಿದ್ದ ಹಿರಿಯ ನಾಗರಿಕರ ಬಂಧನ

ಮೈಸೂರು: ಜೂಜಾಡುತ್ತಿದ್ದ 6 ಮಂದಿ ಹಿರಿಯ ನಾಗರಿಕರನ್ನು ವಶಕ್ಕೆ ಪಡೆದ ಲಕ್ಷ್ಮೀಪುರಂ ಪೊಲೀಸರು, 22 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದ ಎಲ್ಲರೂ ಹಿರಿಯ ನಾಗರಿಕರಾಗಿದ್ದು, ಇವರು ಶುಕ್ರವಾರ ಸಮಯ ಕಳೆಯಲೆಂದು ರಾಮಸ್ವಾಮಿ ವೃತ್ತದ ಮನೆಯೊಂದರ ಮೇಲೆ ಕಟ್ಟಲಾಗಿದ್ದ ಸಣ್ಣದೊಂದು ರೂಂನಲ್ಲಿ ಜೂಜಾಟವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us