ಧಗ ಧಗನೆ ಹೊತ್ತಿ ಉರಿದ ಶಾಲಾ ಬಸ್‌; ತಪ್ಪಿದ ಭಾರೀ ಅನಾಹುತ!

ಮೈಸೂರು: ಶಾಲಾ ಬಸ್‌ ಒಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಧಗ- ಧಗನೆ ಉರಿದು, ಬಸ್‌ ಸುಟ್ಟು ಕರಕಲಾದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಡಿಪಿಎಂಎಲ್‌ ಶಾಲೆಯ ಆವರಣದಲ್ಲಿ ನಡೆದಿದೆ.

ಮೈಸೂರಿನ ಪಿರಿಯಾಪಟ್ಟಣದ DPML ಶಾಲೆಯಲ್ಲಿ, ಶಾಲಾ ಮಕ್ಕಳನ್ನು ‌ಕೆಳಗಿಳಿಸಿ ಚಾಲಕ ಶಾಲೆಗೆ ಹೋದ ಕೆಲವೆ ಸಮಯದಲ್ಲಿ ಬಸ್ ಧಗಧಗನೇ ಹೊತ್ತಿ ಉರಿದಿದ್ದು. ಮಕ್ಕಳಿಗೆ ಆಗುತ್ತಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

ಒಂದು ಬಸ್ ಸಂಪೂರ್ಣ ಬೆಂಕಿಗಾಹುತಿಯಾದರೆ, ಕೆಲವು ಬಸ್ ಗಳಿಗೆ ಭಾಗಶಃ ಬೆಂಕಿ ತಗುಲಿದೆ. ಬೆಂಕಿ ತಗಲುತ್ತಿದ್ದಂತೆ ಅಕ್ಕ ಪಕ್ಕ ನಿಲ್ಲಿಸಿದ್ದ ಬಸ್ ಗಳನ್ನು ಸ್ಥಳಾಂತರ ಮಾಡಲಾಗಿದೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ಕುತೂಹಲ ಕಾರಿಯಾಗಿದೆ.

× Chat with us