ಜೈಲು ವಾಸದಲ್ಲಿ ಕನ್ನಡ ಕಲಿತಿದ್ದಾರಂತೆ ಶಶಿಕಲಾ ನಟರಾಜನ್‌!

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್‌ ಕನ್ನಡ ಭಾಷೆ ಕಲಿತಿದ್ದಾರಂತೆ.

ನಾಲ್ಕು ವರ್ಷಗಳ ಜೈಲುವಾಸದಲ್ಲಿ ನಲಿಕಲಿ ಮೂಲಕ ತಮಿಳುನಾಡಿನ ಶಶಿಕಲಾ ಕನ್ನಡವನ್ನು ಓದಲು, ಬರೆಯಲು ಕಲಿತಿದ್ದಾರೆ ಎನ್ನಲಾಗಿದೆ.

ಕನ್ನಡ ಕಲಿಕೆ ಅಷ್ಟೇ ಅಲ್ಲ ಜೈಲಿನಲ್ಲಿ ಶಶಿಕಲಾ ತರಾಕಾರಿಗಳನ್ನೂ ಬೆಳೆದಿದ್ದಾರಂತೆ. ಅವರು ಬೆಳೆದ ತರಕಾರಿಯನ್ನು ಜೈಲಿನಲ್ಲಿ ತಯಾರಾಗುವ ಅಡುಗೆಗೆ ಬಳಕೆ ಮಾಡಲಾಗಿದೆ. ಅದಕ್ಕೆ ಕೂಲಿ ಕೂಡ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಶಶಿಕಲಾ ಇನ್ನೇನು ಜೈಲಿನಿಂದ ಬಿಡುಗಡೆಯಾಗುವ ಹಂತದಲ್ಲಿದ್ದಾರೆ ಎನ್ನಲಾಗಿದೆ.

× Chat with us