ಅಹಮದಾಬಾದ್ ನಲ್ಲಿ ವಿಶೇಷ ಪೊಲೀಸ್ ತಂಡದ ಬಲೆಗೆ ಬಿದ್ದ ಪಾತಕಿ
ಮೈಸೂರು: ತನ್ನ ಅಪರಾಧ ಚಟುವಟಿಕೆ ಮತ್ತು ರಾಜಕೀಯ ನಂಟಿನ ಮೂಲಕ ಕರ್ನಾಟಕದ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಸ್ಯಾಂಟ್ರೊ ರವಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದೂರದ ಗುಜರಾತಿನ ರಾಜಧಾನಿ ಅಹಮದಾಬಾದ್ ನಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ರಾಜ್ಯ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದೆ. ತನ್ನ ಸುಳ್ಳು ಕೇಸು ದಾಖಲಿಸಿ ಜೈಲಿಗೆ ತಳ್ಳಿದ ಸ್ಯಾಂಟ್ರೋ ರವಿಯ ವಿರುದ್ಧ ಮೂರನೇ ಪತ್ನಿ ದೂರಿತ್ತ ಬಳಿಕ ಪಾತಕಿ ರವಿ ತಲೆ ಮರೆಸಿಕೊಂಡಿದ್ದ. ಇದಾಗಿ 11 ದಿನಗಳ ಬಳಿಕ ರವಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸಿ ಕೋರ್ಟ್ ಮೊರೆ ಹೋಗಿದ್ದ ಸ್ಯಾಂಟ್ರೋ ರವಿಗೆ ಜಾಮೀನು ದೊರೆತಿರಲಿಲ್ಲ. ಗುರುವಾರ ರಾಮನಗರದಲ್ಲಿ ಸ್ಯಾಂಟ್ರೋ ರವಿಗಾಗಿ ಪೊಲೀಸರು ನಾಕಾ ಬಂಧಿ ಹಾಕಿ ಕಾಯುತ್ತಿದ್ದರು.ಈ ವೇಳೆ ರವಿ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಸ್ಯಾಂಟ್ರೋ ರವಿ ಬಂಧನವಾಗಿದ್ದು ಆತನ ಕುಕೃತ್ಯದ ಪಟ್ಟಿ ಹೊರ ಬೀಳುವ ನಿರೀಕ್ಷೆ ಇದೆ.