ಚಾ.ನಗರ ಬಡರೋಗಿಗೆ ನೆರವು… ಆಂದೋಲನ ವರದಿ ನೋಡಿ ಧನ್ಯವಾದ ಹೇಳಿದ್ದ ನಟ ಸಂಚಾರಿ ವಿಜಯ್‌

ಮೈಸೂರು: ಕನ್ನಡದ ಹೆಸರಾಂತ ನಟ, ರಾಷ್ಟ್ರಪ್ರಶ್ತಿ ವಿಜೇತ ಸಂಚಾರಿ ವಿಜಯ್‌ ಅವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನೆರವಾಗುವ ತುಡಿತ ಹೊಂದಿದ್ದ ನಟನನ್ನು ಕಳೆದುಕೊಳ್ಳುವ ಮೂಲಕ ಕನ್ನಡ ಚಿತ್ರರಂಗ ಬಡವಾಗಿದೆ.

ಕೆಲವು ತಿಂಗಳ ಹಿಂದಷ್ಟೆ ವಿಜಯ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಚಾಮರಾಜನಗರ ವ್ಯಕ್ತಿಯೊಬ್ಬರಿಗೆ ನೆರವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಜಯ್‌ ಅವರು ಶುರು ಮಾಡಿದ್ದ ಅಭಿಯಾನಕ್ಕೆ ಆಂದೋಲನ ಡಿಜಿಟಲ್‌ ವೇದಿಕೆ ಕೈ ಜೋಡಿಸಿತ್ತು.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಸಹಾಯ ಮಾಡಿ ಬೇರೆಯವರೂ ನೆರವಾಗುವಂತೆ ವಿಜಯ್‌ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಬರೆದಿದ್ದರು. ಇದನ್ನು ವರದಿ ಮಾಡಿದ್ದ ಆಂದೋಲನ ಡಿಜಿಟಲ್‌ ವೇದಿಕೆಗೆ ವಿಜಯ್‌ ಅವರು ಧನ್ಯವಾದ ಹೇಳಿದ್ದರು.

ಆಂದೋಲನ ಡಿಜಿಟಲ್‌ ಜೊತೆ ಮಾತನಾಡಿದ್ದ ಸಂಚಾರಿ ವಿಜಯ್‌ ಚಾಮಾರಜನಗರದ ಬಡ ರೋಗಿಯೊಬ್ಬರು ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದಾರೆ. ಅವರ ಚಿಕಿತ್ಸೆಗೆ ಹೆಚ್ಚು ಹಣದ ನೆರವು ಬೇಕಾಗಿದೆ. ನನ್ನ ಅಭಿಯಾನದಲ್ಲಿ ಕೈ ಜೋಡಿಸಿದ್ದಕ್ಕೆ ಧನ್ಯವಾದಗಳು. ಆಂದೋಲನ ಪತ್ರಿಕೆಯು ನೊಂದವರ, ಬಡವರ ಪರ ಕಾಳಜಿ ಹೊಂದಿರುವುದನ್ನು ನೋಡಿ ಖುಷಿಯಾಗುತ್ತಿದೆ. ಈ ರೀತಿಯ ಕಾಳಜಿಯು ಮುಂದುವರಿಯಲಿ ಎಂದು ಹಾರೈಸಿದ್ದರು.

× Chat with us