ಲಂಡನ್‌ ಮೇಯರ್‌ ಆಗಿ ಸಾದಿಕ್‌ ಖಾನ್‌ 2ನೇ ಬಾರಿ ಆಯ್ಕೆ

ಲಂಡನ್: ಲೇಬರ್‌ ಪಕ್ಷದ ಮುಖಂಡ ಸಾದಿಕ್‌ ಖಾನ್‌ ಅವರು ಲಂಡನ್‌ ಮೇಯರ್‌ ಆಗಿ ಮರು ಆಯ್ಕೆಯಾಗಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಕ್ಷದ ಎದುರಾಳಿ ಶಾನ್‌ ಬೈಲಿ ವಿರುದ್ಧ ಸಾದಿಕ್‌ ಜಯ ಸಾಧಿಸಿದ್ದಾರೆ.

ಸಾದಿಕ್‌ 2016ರಲ್ಲಿ ಮೇಯರ್‌ ಆಗಿದ್ದರು. ಆ ಮೂಲಕ ಮೇಯರ್‌ ಹುದ್ದೆಗೇರಿದ ಮೊದಲ ಮುಸ್ಲಿಂ ಮುಖಂಡ ಎನಿಸಿಕೊಂಡಿದ್ದರು.

× Chat with us