ಜು.17ರಿಂದ ಐದು ದಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಓಪನ್

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಸಪೂಜೆ ಹಿನ್ನೆಲೆಯಲ್ಲಿ ಜು.17ರಿಂದ 21ರವರೆಗೆ ಬಾಗಿಲು ತೆರೆಯಲಿದೆ.

ಕೋವಿಡ್‌ ಕಾರಣದಿಂದಾಗಿ ಈ ವೇಳೆ ಗರಿಷ್ಠ 3000 ಜನರಿಗೆ ಮಾತ್ರ ದೇವಸ್ಥಾನಕ್ಕೆ ಬರಲು ಅವಕಾಶ ಇರುತ್ತದೆ. ಇಲ್ಲಿಗೆ ಆಗಮಿಸುವವರು ಕೋವಿಡ್‌ ಲಸಿಕೆಯ ಎರಡು ಡೋಸ್‌ ಅನ್ನು ಪಡೆದಿರಬೇಕು. ಅಲ್ಲದೇ, ಕೋವಿಡ್‌ ನೆಗೆಟಿವ್‌ ವರದಿಯನ್ನು ಕಡ್ಡಾಯವಾಗಿ ತರಬೇಕು ಎಂದು ಕೇರಳ ಸರ್ಕಾರ ತಿಳಿಸಿದೆ.

ದೇಗುಲಕ್ಕೆ ಆಗಮಿಸಲು ಯಾತ್ರಿಕರು ಮೊದಲು ತಮ್ಮ ಲಸಿಕೆ ಪ್ರಮಾಣ ಪತ್ರ ಮತ್ತು ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿಯನ್ನು ವರ್ಚ್ಯುವಲ್​ ಕ್ಯೂ ಮೂಲಕ ನೀಡಿ, ಆನ್​ಲೈನ್​ನಲ್ಲಿ ಬುಕಿಂಗ್​ ಮಾಡಬೇಕಾಗುತ್ತದೆ ಎಂದೂ ಹೇಳಲಾಗಿದೆ.

× Chat with us