ಪ್ರತಿಭಟನೆಗೆ 50 ಟ್ರ್ಯಾಕ್ಟರ್‌ ತಂದ್ರೆ ಅಭ್ಯಂತರವಿಲ್ಲ: ಎಸ್.‌ಟಿ. ಸೋಮಶೇಖರ್‌‌

ಮೈಸೂರು: ಏಕಕಾಲಕ್ಕೆ ಸಾವಿರಾರು ಟ್ರ್ಯಾಕ್ಟರ್‌ಗಳು ರಸ್ತೆಗಳಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಬದಲಿಗೆ ಸಾಂಕೇತಿಕವಾಗಿ 50 ಟ್ರ್ಯಾಕ್ಟರ್‌ ತಂದು ಮೆರವಣಿಗೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಗಣರಾಜ್ಯೋತ್ಸವ ದಿನದಂದು ದೇಶಾದ್ಯಂತ ನಡೆಸುವ ಟ್ರ್ಯಾಕ್ಟರ್‌ ರ‍್ಯಾಲಿ ಕುರಿತು ಮಾತನಾಡಿದ ಅವರು, ರೈತರ ಪ್ರತಿಭಟನೆಗೆ ನಮ್ಮ ವಿರೋಧ ಇಲ್ಲ. ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಬೆಂಗಳೂರಿನಲ್ಲಿ ಅಪಾರ ಪ್ರಮಾಣದ ಜನದಟ್ಟಣೆ ಇದೆ. ಏಕಕಾಲಕ್ಕೆ ಸಾವಿರಾರು ಟ್ರ್ಯಾಕ್ಟರ್‌ಗಳು ರಸ್ತೆಗಿಳಿದರೆ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತದೆ. ಸಾಂಕೇತಿಕವಾಗಿ 50 ಟ್ರ್ಯಾಕ್ಟರ್ ತಂದು ಮೆರವಣಿಗೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.

ರ‍್ಯಾಲಿಗೆ ಅನುಮತಿ ಇಲ್ಲ ಎಂದು ಈಗಾಗಲೇ ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿದ್ದಾರೆ. ದೆಹಲಿಯ ರಸ್ತೆಗಳೇ ಬೇರೆ, ಬೆಂಗಳೂರಿನ ರಸ್ತೆಗಳೇ ಬೇರೆ ಇವೆ. ಹೀಗಾಗಿ, ಬೆಂಗಳೂರಿನಲ್ಲಿ ದೊಡ್ಡ ಪ್ರತಿಭಟನೆ ನಡೆದರೆ ಕರ್ನಾಟಕವೇ ಸ್ತಬ್ದವಾಗುತ್ತದೆ. ರೈತರು ಸಹ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ಮಾಡಲಿ ಎಂದರು.

× Chat with us