ನವದೆಹಲಿ: ನಾವೆಲ್ಲರೂ 1, 2, 5, 10 ಮತ್ತು 20 ರೂ. ಕಾಯಿನ್‌ಗಳನ್ನು ಬಳಸಿದ್ದೇವೆ. ಶೀಘ್ರದಲ್ಲೇ ಭಾರತ ಸರ್ಕಾರ 100 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆಗೊಳಿಸಲಿದೆ. ಆದರೆ ಇದು ನಿತ್ಯ ಬಳಕೆಗೆ ಸಿಗುವುದು ಅಪರೂಪ. ನಿರ್ದಿಷ್ಟ ಸಂಖ್ಯೆಯ ನಾಣ್ಯಗಳನ್ನು ಮಾತ್ರ ಆರ್‌ಬಿಐ ಟಂಕಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರ “ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮವು ಶೀಘ್ರದಲ್ಲೇ 100ನೇ ಆವೃತ್ತಿ ಪೂರೈಸುತ್ತಿದೆ. ಇದರ ಸ್ಮರಣಾರ್ಥ ಆರ್‌ಬಿಐ 100 ರೂ. ಮುಖಬೆಲೆಯ ನಾಣ್ಯವನ್ನು ಅನಾವರಣಗೊಳಿಸುತ್ತಿದೆ. ತಮ್ಮ 100ನೇ “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಘೋಷಿಸುವ ಸಾಧ್ಯತೆ ಇದೆ.
ಹೇಗಿರಲಿದೆ ನಾಣ್ಯ?
ನಾಣ್ಯದ ಒಂದು ಬದಿಯಲ್ಲಿ 100 ರೂ. ಮುಖಬೆಲೆಯ ಗುರುತು ಇರಲಿದೆ. ಇನ್ನೊಂದು ಬದಿಯಲ್ಲಿ “ಮನ್ ಕೀ ಬಾತ್’ 100ನೇ ಆವೃತ್ತಿಯ ಸಂಕೇತವಿದ್ದು, ಇದರಲ್ಲಿ ಧ್ವನಿ ತರಂಗಗಳಿರುವ ಮೈಕ್ರೊಫೋನ್ ಚಿತ್ರವಿರಲಿದೆ. ನಾಣ್ಯದ ಒಟ್ಟು ತೂಕ 35 ಗ್ರಾಂ ಇರಲಿದೆ ಎಂದು ಮೂಲಗಳು ತಿಳಿಸಿವೆ.
1 ಲಕ್ಷ ಸ್ಥಳಗಳಲ್ಲಿ ಪ್ರಸಾರ:
“ಮನ್ ಕೀ ಬಾತ್’ 100ನೇ ಆವೃತ್ತಿಯ ಬಾನುಲಿ ಕಾರ್ಯಕ್ರಮವು ಏ.30ರಂದು ಪ್ರಸಾರವಾಗಲಿದೆ. ಇದು ಆಯ್ದ 1 ಲಕ್ಷ ಸ್ಥಳಗಳಲ್ಲಿ ಪ್ರಸಾರ ಆಗಲಿದೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯ ನಗರಿಯಲ್ಲಿ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು,…
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ,…
ಮಂಡ್ಯ: ರಾಜ್ಯದಲ್ಲಿ ಅತಿಭಾಷೆ ಹೆಚ್ಚು ಕನ್ನಡ ಭಾಷೆ ಮಾತನಾಡುವ ಸ್ಥಳ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಮೂರು ದಿನಗಳ ಕಾಲ…
ಬೆಳಗಾವಿ: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ ಎಂದು…
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿದ್ದು, ಇದರಲ್ಲಿ ಸುಮಾರು 157 ಕಲಾತಂಡಗಳು ಭಾಗವಹಿಸಿ ಸಮ್ಮೇಳನಕ್ಕೆ ಮೆರಗು…
ಮಂಡ್ಯ: ಸಾಮಾನ್ಯವಾಗಿ ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಅವಾಚ್ಯ ಪದ ಬಳಕೆ…