ಆರ್ ಎಸ್‍ಎಸ್‍ನವರೇ ನಿಜವಾದ ತಾಲಿಬಾನಿಗಳು: ಆರ್‍.ಧ್ರುವನಾರಾಯಣ

ಚಾಮರಾಜನಗರ: ಆರ್ ಎಸ್‍ಎಸ್‍ನವರೇ ನಿಜವಾದ ತಾಲಿಬಾನಿಗಳು ಅವರ ವಿರೋಧಿಗಳು ಅಫ್ಗಾನಿಸ್ತಾನ ನೋಡಿ ಅರ್ಥಮಾಡಿಕೊಳ್ಳಲಿ ಎಂದು ಸಂಸದ ಪ್ರತಾಪ್‍ಸಿಂಹ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ .ಧ್ರುವನಾರಾಯಣ ತಿರುಗೇಟು ನೀಡಿದ್ದಾರೆ.

`ಸಿಎಎ ವಿರೋಧಿಸುವವರು ಅಫ್ಗಾನಿಸ್ತಾನದ ಸ್ಥಿತಿ ನೋಡಿ ಅರ್ಥಮಾಡಿಕೊಳ್ಳಲಿ’ ಎಂಬ ಪ್ರತಾಪ್‍ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲಿಬಾನಿಗಳು ಯಾವ ರೀತಿ ಅವರ ಧರ್ಮ ಪಾಲನೆ ಮಾಡುತ್ತಾರೋ ಅದೇ ರೀತಿ, ಭಾರತದಲ್ಲಿ ಆರ್‍ಎಸ್‍ಎಸ್‍್ ಮಾಡುತ್ತಿದೆ. ತಾಲಿಬಾನಿಗೂ ಸಿಎಎಗೂ ಹೇಗೆ ಸಂಬಂಧ ಕಲ್ಪಿಸುತ್ತಾರೆ? ತಾಲಿಬಾನ್ ನಿಂದ ದೇಶಕ್ಕೆ ಆಗುವ ಅನಾಹುತದ ಬಗ್ಗೆ ಕಟ್ಟೆಚ್ಚರ ವಹಿಸುವ ಕುರಿತು ಸಂಸದರು ಯೋಚಿಸಲಿ ಎಂದರು.

ಅಸ್ಸಾಂಗೆ ಬಾಂಗ್ಲಾದೇಶದಿಂದ ಮುಸ್ಲಿಂರೇ ಹೆಚ್ಚಾಗಿ ಬಂದಿದ್ದಾರೆ ಎಂಬ ದೃಷ್ಟಿಕೋನದಿಂದ ಸಿಎಎ, ಎನ್ ಆರ್ ಸಿ ಜಾರಿಗೆ ತಂದರು. ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ತಿಳಿದ ಬಳಿಕ ಸುಮ್ಮನಾದರು. ಬಿಜೆಪಿ ಕೋಮುವಾದಿ ಪಕ್ಷ. ಆ ಕೋಮುವಾದಿತನವನ್ನೇ ಇಟ್ಟುಕೊಂಡು ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲಕಿಡಿ ಕಾರಿದರು.

× Chat with us