ತೆರೆಗೆ ಬರಲಿದೆ ರೋಹಿಣಿ ಸಿಂಧೂರಿ ಬಯೋಪಿಕ್‌, ಮೈಸೂರು ರಂಪಾಟಕ್ಕೆ ಲಿಂಕ್‌ ಇದ್ಯಾ?

ಮೈಸೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಯೋಪಿಕ್‌ ಅನ್ನು ತೆರೆಗೆ ತರುಲು ಸಿದ್ಧತೆ ನಡೆಯುತ್ತಿದ್ದು,  ಮಂಡ್ಯ ಮೂಲದ ನಟಿ ಅಕ್ಷತಾ ಪಾಂಡವಪುರ ಅವರು ಇದರಲ್ಲಿ ನಟಿಸಲಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಫಿಲಮ್‌ ಸಂಸ್ಥೆಯಿಂದ ಚಿತ್ರ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅಕ್ಷತಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಹಿತಿ, ಲೇಖಕ ಕೃಷ್ಣ ಸ್ವರ್ಣಸಂದ್ರ ಅವರು ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ರೋಹಿಣಿ ಅವರು ಆಂಧ್ರಪ್ರದೇಶ ಮೂಲದವರಾದ ಕಾರಣ, ಅವರ ಹುಟ್ಟೂರು, ಮತ್ತು ಸೇವೆ ಸಲ್ಲಿಸಲಾದ ಹಾಸನ, ಮಂಡ್ಯ, ಮೈಸೂರು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡವು ತಿಳಿಸಿದೆ.

ಮೈಸೂರು ಪಾಲಿಕೆಯ ನಿರ್ಗಮಿತ ಆಯುಕ್ತೆ ಶಿಲ್ಪಾನಾಗ್‌ ಅವರಿಗೂ ರೋಹಿಣಿ ಸಿಂಧೂರಿಗೂ  ಆದ ಜಟಾಪಟಿಯ ನಂತರ ಈ ನಿರ್ಧಾರ ತೆಗೆದುಕೊಂಡಿಲ್ಲ ಒಂದು ವರ್ಷದಿಂದ ಈ ಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದ್ದೇವೆ. ಮೈಸೂರಿನಲ್ಲಾದ ವಿವಾದಕ್ಕೂ ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಮಂಡ್ಯದಲ್ಲಿ ರೋಹಿಣಿ ಅವರು ಮಾಡಿದ ಕೆಲಸಗಳ ಕುರಿತು ಚಿತ್ರ ನಿರ್ಮಿಸಲಾಗುತ್ತಿದೆ ಎಂದು ನಿರ್ದೇಶಕ ಕೃಷ್ಣ ಸ್ವರ್ಣಂ ತಿಳಿಸಿದ್ದಾರೆ.

ಅಕ್ಷತಾ ಅವರು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.

× Chat with us