ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ: ಡಿಸಿ ಅಧಿಕೃತ ನಿವಾಸ ನವೀಕರಣ ತನಿಖೆಗೆ ಆದೇಶ

ಮೈಸೂರು: ಐಎಎಸ್‌ ಅಧಿಕಾರಿಗಳ ಜಟಾಪಟಿ ಕಾರಣದಿಂದಾಗಿ ವರ್ಗಾವಣೆಯಾಗಿದ್ದ ರೋಹಿಣಿ ಸಿಂಧೂರಿ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಜಲಸನ್ನಿಧಿ ಪಾರಂಪರಿಕ ಕಟ್ಟಡವನ್ನು ಅನಧಿಕೃತವಾಗಿ ನವೀಕರಿಸಿರುವ ಬಗ್ಗೆ ತನಿಖೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಡಿಸಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್‌ ಪೂಲ್‌ ನಿರ್ಮಿಸಿದ್ದ ಕಾರಣಕ್ಕೆ ರೋಹಿಣಿ ಸಿಂಧೂರಿ ಅವರು ಸುದ್ದಿಯಾಗಿದ್ದರು. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಸ್ವಿಮ್ಮಿಂಗ್‌ ಪೂಲ್‌ ಅಗತ್ಯವಿತ್ತೆ ಎಂದು ಹಲವರು ಟೀಕೆ ವ್ಯಕ್ತಪಡಿಸಿದ್ದರು. ಪಾರಂಪರಿಕ ಕಟ್ಟಡದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್‌ ಗಂಭೀರ ಆರೋಪ ಮಾಡಿದ್ದರು.

× Chat with us