ಮಹಾತ್ಮ ಗಾಂಧೀಜಿಗೆ ಅಮೆರಿಕ ಅತ್ನುನ್ನತ ನಾಗರಿಕ ಪ್ರಶಸ್ತಿ: ನಿರ್ಣಯ ಮರುಮಂಡನೆ

ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸುವ ನಿರ್ಣಯವನ್ನು ನ್ಯೂಯಾರ್ಕ್‌ನ ಸಂಸದ ಅಮೆರಿಕ ಸದನದಲ್ಲಿ ಮರುಮಂಡನೆ ಮಾಡಿದ್ದಾರೆ.

ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧೀಜಿ ಅವರಿಗೆ ಅಮೆರಿಕದ ಅತ್ಯುನ್ನತ ಗೌರವವಾದ ಚಿನ್ನದ ಪದಕ ಮಾಡಬೇಕು ಎಂದು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.

ಇದುವರೆಗೂ ಜಾರ್ಜ್ ವಾಷಿಂಗ್ಟನ್, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಮದರ್ ತೆರೆಸಾ, ರೋಸಾ ಪಾರ್ಕ್ಸ್​ ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ಗೌರವವಾದ ಈ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಸತ್ಯಾಗ್ರಹ, ಅಹಿಂಸಾವಾದದ ಮೂಲಕ ಇಡೀ ಪ್ರಪಂಚದಾದ್ಯಂತ ಪ್ರಭಾವ ಬೀರಿರುವ ಮಹಾತ್ಮ ಗಾಂಧಿ ಅವರಿಗೂ ಅಮೆರಿಕದ ಅತ್ಯುನ್ನತ ಗೌರವವಾದ ಚಿನ್ನದ ಪದಕ ಘೋಷಿಸಬೇಕು ಎಂದು ಅಮೆರಿಕದ ಸದನದಲ್ಲಿ ಚರ್ಚಿಸಲಾಗಿದೆ.

ಅಮೆರಿಕದ ಕಾಂಗ್ರೆಸ್ ಪ್ರತಿನಿಧಿಯಾಗಿರುವ ಕ್ಯಾರೊಲಿನ್ ಬಿ ಅವರು ಈ ಕುರಿತು ಮರುಮಂಡನೆ ಮಾಡಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಜನಾಂಗೀಯ ಸಮಾನತೆಗಾಗಿ, ನೆಲ್ಸನ್ ಮಂಡೇಲಾ ಅವರ ವರ್ಣಭೇದ ನೀತಿಯ ವಿರುದ್ಧದ ಹೋರಾಟದಿಂದ ಅವರ ಪರಂಪರೆ ವಿಶ್ವದಾದ್ಯಂತ ನಾಗರಿಕ ಹಕ್ಕುಗಳ ಚಳುವಳಿಗಳಿಗೆ ಸ್ಫೂರ್ತಿ ನೀಡಿತು. ಒಬ್ಬ ಸಾರ್ವಜನಿಕ ಸೇವಕನಾಗಿ, ನಾನು ಅವರ ಧೈರ್ಯ ಮತ್ತು ಉದಾಹರಣೆಯಿಂದ ಪ್ರತಿದಿನ ಸ್ಫೂರ್ತಿ ಪಡೆಯುತ್ತೇನೆ ಎಂದಿದ್ದಾರೆ.

× Chat with us