ಯುವಕರು ರಕ್ಷಿಸಿದ್ದ ಜಿಂಕೆ ಚಿಕಿತ್ಸೆ ಫಲಿಸದೇ ಸಾವು!

ಮೈಸೂರು: ಕಳಲೆ ಗ್ರಾಮದಲ್ಲಿ ಯುವಕರು ರಕ್ಷಿಸಿದ್ದ ಜಿಂಕೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದೆ.

ಬೀಚನಹಳ್ಳಿ ನಾಲೆಯಲ್ಲಿ ಜಿಂಕೆ ಆಕಸ್ಮಿಕವಾಗಿ ನಾಲೆಗೆ ಬಿದ್ದಿತ್ತು. ಜಮೀನಿಗೆ ತೆರಳಿದ್ದ ಗ್ರಾಮದ ಯುವಕರಾದ ರವಿಚಂದ್ರ, ವಿನೋದ್‌, ರಾಜೇಶ್‌, ಜಿಂಕೆಯನ್ನು ರಕ್ಷಿಸಿದ್ದಾರೆ. ನಾಲೆಗೆ ಬಿದ್ದ ಪರಿಣಾಮ ಜಿಂಕೆಗೆ ಗಾಯಗಳಾಗಿದ್ದವು. ಯುವಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆಯನ್ನು ವಶಕ್ಕೆ ಪಡೆದು ಚಿಕಿತ್ಸೆ ಕೊಡಿಸಿದ್ದರು.

× Chat with us