ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಶೆಡ್‌ನ ಒಳಗೆ ನಡೆದದ್ದು ಎಲ್ಲವೂ ರೆಕಾರ್ಡ್ ಆಗಿರುತ್ತದೆ ಎಂದು ಶೆಡ್ ಮಾಲೀಕರಾದ ಜಯಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಅವರನ್ನು ಕೋಡಿಹಾಕಿದ್ದ ಶೆಡ್ ಸುತ್ತ ಚಿಚಿ ಕ್ಯಾಮೆರಾ ಇದೆ ಎಲ್ಲವೂ ರೆಕಾರ್ಡ್ ಆಗಿರುತ್ತದೆ ಎಂದು ಹೇಳಿದ್ದಾರೆ.
ಕಳೆದ 25 ವರ್ಷದಿಂದ ಕಿಶೋರ್ ಎಂಬುವವರಿಗೆ ನನ್ನ ಜಾಗವನ್ನು ಬಾಡಿಗೆಗೆ ನೀಡಿದ್ದೇನೆ. ಲೋನ್ ಕೇಸ್‌ನಲ್ಲಿ ಸೀಸ್ ಮಾಡಿದ ವಾಹನಗಳನ್ನು ಶೆಡ್‌ನಲ್ಲಿ ನಿಲ್ಲಿಸುತ್ತಿದ್ದರು. ಶೆಡ್ ಒಳಗೆ ಯಾವುದೇ ವಾಹನ ಹೋದರು ರೆಕಾರ್ಡ್ ಆಗಿರುತ್ತದೆ. ಯಾವುದೇ ವಾಹನ ಶೆಡ್‌ನಿಂದ ಹೊರ ಬಂದರೂ ರೆಕಾರ್ಡ್ ಆಗಿರುತ್ತದೆ ಎಂದರು.
5ರಿಂದ 6 ಎಕ್ಕರೆ ಪ್ರಾಪರ್ಟಿ ಬ್ಯಾಂಕ್‌ನವರದ್ದಾಗಿರುವ ಕಾರಣ ಎಲ್ಲಾ ರೀತಿಯ ಸೇಫ್ಟ್‌ಯನ್ನು ಮಾಡಲಾಗಿದೆ. ಹೀಗಾಗಿ ಏನನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದರು.
ಯಾವುದೇ ವಿಚಾರವನ್ನು ಮುಚ್ಚಿಡಲು ಸಾಧ್ಯವಿಲ್ಲ. ದರ್ಶನ್ ಬಂದಿರುವುದಾಗಲಿ, ಹೋಗಿರುವುದಾಗಲಿ, ಅಥವ ರೇಣುಕಾಸ್ವಾಮಿಯನ್ನು ಕರೆತಂದಿರುವುದು, ಹೊಡೆದಿರುವುದು ಎಲ್ಲವೂ ರೆಕಾರ್ಡ್ ಆಗಿರುತ್ತದೆ ಎಂದರು.
ಇಲ್ಲಿವರೆಗೆ ಯಾವ ಪೊಲೀಸರು ನನ್ನನ್ನು ಸಂಪರ್ಕ ಮಾಡಿಲ್ಲ. ಒಂದು ವೇಳೆ ಮಾಡಿದರೆ ನನ್ನನ್ನು ಕರೆದರೆ ವಿಚಾರಣೆಗೆ ಹೋಗುತ್ತೇನೆ ಎಂದು ಹೇಳಿದರು.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…