ಒಟ್ಟಾವಾ: ಖ್ಯಾತ ಪಾಕಿಸ್ಥಾನಿ-ಕೆನಡಾ ಅಂಕಣಕಾರ ಮತ್ತು ಲೇಖಕ ತಾರೆಕ್ ಫತಾಹ್ ಅವರು ಕ್ಯಾನ್ಸರ್‌ನೊಂದಿಗೆ ಸುದೀರ್ಘ ಹೋರಾಟದ ನಂತರ 73 ನೇ ವಯಸ್ಸಿನಲ್ಲಿ ಸೋಮವಾರ ನಿಧನ ಹೊಂದಿದರು ಎಂದು ಅವರ ಪುತ್ರಿ ನತಾಶಾ ಫತಾಹ್ ಹೇಳಿದ್ದಾರೆ.
ನತಾಶಾ ತನ್ನ ತಂದೆಯ ನಿಧನದ ಸುದ್ದಿಯನ್ನು ಟ್ವಿಟರ್ ನಲ್ಲಿ “ಪಂಜಾಬ್‌ನ ಸಿಂಹ, ಹಿಂದೂಸ್ಥಾನದ ಮಗ ಮತ್ತು ಕೆನಡಾದ ಪ್ರೇಮಿ” ಎಂದು ಬಣ್ಣಿಸಿದ್ದಾರೆ. ಫತಾಹ್ ಸತ್ಯದ ವಾಗ್ಮಿ, ನ್ಯಾಯಕ್ಕಾಗಿ ಹೋರಾಟಗಾರ ಮತ್ತು ತುಳಿತಕ್ಕೊಳಗಾದವರ ಧ್ವನಿ ಎಂದು ಅವರು ಹೇಳಿದರು.
ಫತಾಹ್ ಅವರು ಇಸ್ಲಾಂ ಧರ್ಮದ ಬಗ್ಗೆ ಪ್ರಗತಿಪರ ದೃಷ್ಟಿಕೋನಗಳು ಮತ್ತು ಪಾಕಿಸ್ಥಾನದ ಬಗ್ಗೆ ಅವರ ಬಲವಾದ ನಿಲುವುಗಳಿಗೆ ಹೆಸರುವಾಸಿಯಾಗಿದ್ದರು. ಅವರು ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಬೆಂಬಲಿಸುತ್ತಿದ್ದರು.
1949 ರಲ್ಲಿ ಪಾಕಿಸ್ಥಾನದಲ್ಲಿ ಜನಿಸಿದ ಫತಾಹ್ 1980 ರ ದಶಕದ ಆರಂಭದಲ್ಲಿ ಕೆನಡಾಕ್ಕೆ ವಲಸೆ ಹೋಗಿದ್ದರು. ರಾಜಕೀಯ ಕಾರ್ಯಕರ್ತ, ಪತ್ರಕರ್ತ ಮತ್ತು ದೂರದರ್ಶನ ನಿರೂಪಕರಾಗಿ ಕೆಲಸ ಮಾಡಿದ್ದರು. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ಬೆಂಗಳೂರು: ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…
ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…
ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…
ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…
ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ…