ಆಸ್ತಿ ಆಸೆಗಾಗಿ ಮೃತ ಮಹಿಳೆಯ ಹೆಬ್ಬೆಟ್ಟನ್ನು ಬಾಂಡ್ ಪೇಪರ್ ಮೇಲೆ ಒತ್ತಿಸಿಕೊಂಡ ಸಂಬಂಧಿಗಳು

ಮೈಸೂರು: ಆಸ್ತಿಯ ಹುಚ್ಚು ಜನರಿಂದ ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಬಲ್ಲ ಘಟನೆಯೊಂದು ನಗರದಲ್ಲಿ ನಡೆದಿದ್ದು, ಆಸ್ತಿ ಕಬಳಿಸುವ ಸಲುವಾಗಿ ಖಾಲಿ ಬಾಂಡ್ ಪೇಪರ್ ಮೇಲೆ ಮೃತದೇಹದ ಹೆಬ್ಬೆಟ್ಟು ಒತ್ತಿಸಿಕೊಂಡ ಅಮಾನವೀಯ ಘಟನೆ ನಗರದ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ.

ನಗರದ ಶ್ರೀರಾಂಪುರ ನಿವಾಸಿ ಜಯಮ್ಮ(63) ಕೆಲ ದಿನಗಳ ಹಿಂದೆ ವಯೋಸಹಜವಾಗಿ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಆಸ್ತಿ ಆಸೆಗಾಗಿ ಆಕೆ ಸತ್ತ ಬಳಿಕ ಮೃತರ ಸಂಬಂಧಿಕರು ಖಾಲಿ ಬಾಂಡ್ ಪೇಪರ್ ಮೇಲೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದಾರೆ. ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಮತ್ತೋರ್ವ ಸಂಬಂಧಿ ವಿಡಿಯೋ ತುಣುಕನ್ನು ವೈರಲ್ ಮಾಡಿದ್ದಾರೆ.

× Chat with us