ನಾಳೆಯಿಂದ ಪ್ರಾಕೃತಿಕ ವಿಜ್ಞಾನ ಸಂಗ್ರಹಾಲಯ ಆರಂಭ

ಮೈಸೂರು: ಸಿದ್ದಾರ್ಥನಗರದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯವು ಆ.23ರಿಂದ ಆರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ಪ್ರವೇಶವಿರುತ್ತದೆ.

ಮಾಸ್ಕ್ ಇಲ್ಲದೆ ಒಳ ಪ್ರವೇಶ ನಿಷೇಧಿಸಲಾಗಿದೆ. ಸಂಗ್ರಹಾಲಯದೊಳಗೆ ಏಕ ಕಾಲದಲ್ಲಿ ಕೇವಲ 20 ಮಂದಿಗೆ ಮಾತ್ರ ಪ್ರವೇಶವಿರುತ್ತದೆ. ಆ ಗುಂಪು ಹೊರಬಂದ ಬಳಿಕ ಮತ್ತೊಂದು ಗುಂಪಿಗೆ ಪ್ರವೇಶವಿರುತ್ತದೆ ಎಂದು ಆರ್‌ಎಂಎನ್‌ಎಚ್ ಮುಖ್ಯಸ್ಥ ಡಾ.ಅರ್ಜುನ್ ಪ್ರಸಾದ್ ತಿಳಿಸಿದ್ದಾರೆ.

× Chat with us