ಕೋಲ್ಕತಾ : ತನ್ನ ಆರಂಭಿಕ ಪಂದ್ಯದಲ್ಲಿ ಗೆದ್ದು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತನ್ನ ಎರಡನೇ ಪಂದ್ಯದಲ್ಲಿ ಸೆಣಸಲು ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ ಈ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ವೇದಿಕೆ ಸಿದ್ದವಾಗಿದೆ.
ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಗುರುವಾರ ಆರ್‌ಸಿಬಿ ವಿರುದ್ಧ ಗೆದ್ದು ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಆದರೆ, ಕಳೆದ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ದ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದ್ದ ಆರ್‌ಸಿಬಿ ವಿರುದ್ಧ ಕೆಕೆಆರ್ ಗೆಲುವು ಪಡೆಯುವುದು ಸುಲಭದ ಮಾತಲ್ಲ.
ಬೆನ್ನು ನೋವಿನ ಸಮಸ್ಯೆಯಿಂದ ನಾಯಕ ಶ್ರೇಯಸ್ ಅಯ್ಯರ್ ಅವರು 2023ರ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಮತ್ತೊಂದು ಕಡೆ ಶಕಿಬ್ ಅಲ್ ಹಸನ್ ಅವರು ಈ ಟೂರ್ನಿಗೆ ಅಲಭ್ಯರಾಗಿದ್ದಾರೆ. ಇದು ಕೆಕೆಆರ್‌ಗೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡವನ್ನು ನಿತೀಶ್ ರಾಣಾ ಮುನ್ನಡೆಸುತ್ತಿದ್ದಾರೆ.
ಟೂರ್ನಿಯ ಆರಂಭದಲ್ಲಿಯೂ ಆರ್‌ಸಿಬಿಗೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ರಜತ್ ಪಾಟಿದಾರ್ ಟೂರ್ನಿಯಿಂದ ಹೊರ ನಡೆದಿದ್ದರೆ, ಮೊದಲನೇ ಪಂದ್ಯದಲ್ಲಿ ರೀಸ್ ಟಾಪ್ಲೀ ಅವರು ಗಾಯಕ್ಕೆ ತುತ್ತಾಗಿದ್ದು ಅವರ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮತ್ತೊಂದೆಡೆ ಜಾಶ್ ಹೇಝಲ್‌ವುಡ್ ಅವರ ಲಭ್ಯತೆ ಬಗ್ಗೆಯೂ ಇನ್ನೂ ಖಚಿತತೆ ಇಲ್ಲ.
RCB ಸಂಭಾವ್ಯ ಪ್ಲೇಯಿಂಗ್ XI
1. ವಿರಾಟ್ ಕೊಹ್ಲಿ (ಓಪನರ್)
2. ಫಾಫ್ ಡು ಪ್ಲೆಸಿಸ್ (ನಾಯಕ, ಓಪನರ್)
3. ಗ್ಲೆನ್ ಮ್ಯಾಕ್ಸ್‌ವೆಲ್ (ಬ್ಯಾಟ್ಸ್‌ಮನ್)
4. ಮೈಕಲ್ ಬ್ರೇಸ್‌ವೆಲ್(ಬ್ಯಾಟ್ಸ್‌ಮನ್)
5. ದಿನೇಶ್ ಕಾರ್ತಿಕ್ (ವಿ.ಕೀ)
6. ಶಹಬಾಝ್ ಅಹ್ಮದ್ (ಆಲ್‌ರೌಂಡರ್)
7.ಡೇವಿಡ್ ವಿಲ್ಲೀ (ಆಲ್‌ರೌಂಡರ್)
8. ಹರ್ಷಲ್ ಪಟೇಲ್ (ವೇಗದ ಬೌಲರ್)
9. ಮೊಹಮ್ಮದ್ ಸಿರಾಜ್ (ವೇಗದ ಬೌಲರ್)
10. ಕರಣ್ ಶರ್ಮಾ (ಸ್ಪಿನ್ನರ್)
11. ಆಕಾಶ್ ದೀಪ್ (ವೇಗದ ಬೌಲರ್)
KKR ಸಂಭಾವ್ಯ ಪ್ಲೇಯಿಂಗ್ XI
1. ರೆಹಮಾನುಲ್ಲಾ ಗುರ್ಬಾಝ್ (ಓಪನರ್, ವಿ.ಕೀ)
2. ಮಂದೀಪ್ ಸಿಂಗ್ (ಓಪನರ್)
3.ವೆಂಕಟೇಶ್ ಅಯ್ಯರ್ (ಬ್ಯಾಟ್ಸ್‌ಮನ್)
4.ನಿತೀಶ್ ರಾಣಾ (ಬ್ಯಾಟ್ಸ್‌ಮನ್, ನಾಯಕ)
5.ರಿಂಕು ಸಿಂಗ್ (ಬ್ಯಾಟ್ಸ್‌ಮನ್) ಆಂಡ್ರೆ ರಸೆಲ್ (ಆಲ್‌ರೌಂಡರ್)
6. ಸುನೀಲ್ ನರೇನ್ (ಆಲ್‌ರೌಂಡರ್)
7. ಶಾರ್ದುಲ್ ಠಾಕೂರ್ (ವೇಗದ ಬೌಲರ್)
8. ಉಮೇಶ್ ಯಾದವ್ (ವೇಗದ ಬೌಲರ್)
9. ಟಿಮ್ ಸೌಥೀ (ವೇಗದ ಬೌಲರ್)
10.ಉಮೇಶ್ ಯಾದವ್ (ವೇಗದ ಬೌಲರ್)
11. ವರುಣ್ ಚಕ್ರವರ್ತಿ (ಸ್ಪಿನ್ನರ್)
ಪಂದ್ಯದ ವಿವರ
9ನೇ ಪಂದ್ಯ, 2023ರ ಐಪಿಎಲ್ ಟೂರ್ನಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್
ದಿನಾಂಕ: ಏಪ್ರಿಲ್ 6, 2023
ಸಮಯ: ಸಂಜೆ 07: 30ಕ್ಕೆ
ಸ್ಥಳ: ಈಡನ್ ಗಾರ್ಡನ್ಸ್ ಮೈದಾನ, ಕೋಲ್ಕತಾ
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್ ಬ್ಯಾಂಡ್‌ನ ಸದ್ದಿನೊಂದಿಗೆ…
ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…
ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…
ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…
ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…