ಆರ್‌ಸಿಬಿ: ಕೊಹ್ಲಿ ತಂಡದ ಅಧ್ಯಕ್ಷರಾಗಿ ಪ್ರಥಮೇಶ್‌ ಮಿಶ್ರಾ ಆಯ್ಕೆ

ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುನ್ನ ತನ್ನ ಫ್ರಾಂಚೈಸ್​ಗೆ ಪ್ರಥಮೇಶ್ ಮಿಶ್ರಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.

ಡಿಯಾಗೋ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿಯಾಗಿರುವ ಪ್ರಥಮೇಶ್ ಜುಲೈ 1ರಿಂದ ಈ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೂ ಆನಂದ್ ಕೃಪಲು ಅವರು ಆರ್‌ಸಿಬಿ ಅಧ್ಯಕ್ಷರಾಗಿದ್ದರು.

ʻರಾಯಲ್ ಚಾಲೆಂಜರ್ಸ್ ಬೆಂಗಳೂರು ಡಿಯಾಗೋ ಇಂಡಿಯಾದ ಅವಿಭಾಜ್ಯ ಅಂಗ. ನಾವೆಲ್ಲರೂ ತಂಡದ ಬಗ್ಗೆ ಹೆಚ್ಚಿನ ಉತ್ಸಾಹ ಹೊಂದಿದ್ದೇವೆ. ವಿರಾಟ್ ಕೊಹ್ಲಿ, ಮೈಕ್ ಹೆಸನ್ ಮತ್ತು ಸೈಮನ್ ಕಟಿಚ್‌ ಅವರೊಂದಿಗೆ ತಂಡದ ಏಳಿಗೆಗೆ ಶ್ರಮಿಸಲು ಉತ್ಸುಕನಾಗಿದ್ದೇನೆ. ಆರ್‌ಸಿಬಿಗೆ ಆನಂದ್ ನೀಡಿದ ಅಪಾರ ಕೊಡುಗೆಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆʼ ಎಂದು ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.

× Chat with us