ರಥಸಪ್ತಮಿ: ಮೈಸೂರು ಅರಮನೆಯಲ್ಲಿ ಸೂರ್ಯನಮಸ್ಕಾರ, ದೇಗುಲದಲ್ಲಿ ಯದುವೀರ್‌ರಿಂದ ಪೂಜೆ ಸಲ್ಲಿಕೆ

ಮೈಸೂರು: ರಥಸಪ್ತಮಿ ಅಂಗವಾಗಿ ನಗರದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಯಿತು. ನೂರಾರು ಯೋಗಾಸಕ್ತರು ಸೂರ್ಯ ವಂದನೆ ಮಾಡಿ ಸೂರ್ಯನಿಗೆ ನಮಸ್ಕರಿಸಿದರು.

ಮೈಸೂರು ಯೋಗ ಒಕ್ಕೂಟ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೂರ್ಯನಾರಾಯಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸೂರ್ಯ ನಮಸ್ಕಾರ ಸೇರಿದಂತೆ ಹಲವು ಯೋಗಗಳನ್ನು ಮಾಡಿ ರಥ ಸಪ್ತಮಿ ಆಚರಿಸಿದ್ದಾರೆ.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇಗುಲಕ್ಕೆ ಪುಟ್ಟಪರ್ತಿ ಸಾಯಿಬಾಬಾರ ಉತ್ತರಾಧಿಕಾರಿ ಮಧುಸೂದನ್ ಸಾಯಿ ಸರಸ್ವತಿ ಅವರು ರಥ ಸಮರ್ಪಣೆ ಮಾಡಿದ್ದಾರೆ. ರಥ ಸಪ್ತಮಿ ಹಿನ್ನೆಲೆಯಲ್ಲಿ ಸಪ್ತ ಅಶ್ವಗಳನ್ನೊಳಗೊಂಡ ಸುವರ್ಣ ಲೇಪಿತ ಸೂರ್ಯರಥವನ್ನು ಚೆಲುವ ನಾರಾಯಣಸ್ವಾಮಿ ದೇಗುಲಕ್ಕೆ ಸಮರ್ಪಿಸಿದ್ದಾರೆ.

× Chat with us