ರಂಗನತಿಟ್ಟು ಪಕ್ಷಿಧಾಮ ಇನ್ಮುಂದೆ ಪ್ರವಾಸಿಗರ ವೀಕ್ಷಣೆಗೆ ಮುಕ್ತ

ಶ್ರೀರಂಗಪಟ್ಟಣ: ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರು ಭೇಟಿ ನೀಡಲು ಸರ್ಕಾರ ಅನುಮತಿ ನೀಡಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನ್‌ಲಾಕ್‌ ಘೋಷಿಸಲಾಗಿದೆ. ಕೋವಿಡ್‌ ನಿಯಮಗಳನ್ನು ಕಡ್ಡಾಯಗೊಳಿಸಿ ಪ್ರವಾಸಿ ತಾಣಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.

ಪಕ್ಷಿಧಾಮದ ಪ್ರವಾಸಿಗರ ದೋಣಿಗಳು, ಲೈಫ್‌ ಜಾಕೆಟ್‌ಗಳಿಗೆ ಪ್ರತಿ ಬಾರಿ ಪ್ರಯಾಣಕ್ಕೆ ಸ್ಯಾನಿಟೈಸೇಷನ್‌ ಮಾಡಲಾಗುವುದು. ದೋಣಿ ವಿಹಾರ ಕೇಂದ್ರ, ಉದ್ಯಾನ, ಪಾತ್‌ ವೇ, ಪರಗೋಲ, ಮಾಹಿತಿ ಕೇಂದ್ರ, ಶೌಚಾಲಯ ಸೇರಿದಂತೆ ಅಗತ್ಯ ಇರುವೆಡೆ ಸ್ಯಾನಿಟೈಸ್‌ ಮಾಡುವ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಪ್ರವಾಸಿಗರಿಗೆ ಕೋವಿಡ್‌ ಮಾರ್ಗಸೂಚಿ

* ಜ್ವರ, ಕೆಮ್ಮು, ಶೀತ, ನೆಗಡಿ ಅನಾರೋಗ್ಯ ಲಕ್ಷಣಗಳಿಲ್ಲದ ಪ್ರವಾಸಿಗರಿಗೆ ಮಾತ್ರ ಪ್ರವೇಶ
* ಪ್ರವೇಶದ್ವಾರದಲ್ಲಿ ಪ್ರವಾಸಿಗರಿಗೆ ದೇಹದ ಉಷ್ಣತೆ ಪರೀಕ್ಷೆ ಕಡ್ಡಾಯ. ದೇಹದ ಉಷ್ಣತೆ ಹೆಚ್ಚಿದ್ದರೆ ಪ್ರವೇಶವಿಲ್ಲ
* ಪ್ರವಾಸಿಗರಿಗೆ ಮಾಸ್ಕ ಕಡ್ಡಾಯ
* ಟಿಕೆಟ್‌ ಪಡೆಯುವಾಗ, ದೋಣಿ ಹತ್ತುವಾಗ ಸಾರ್ವಜನಿಕ ಅಂತರ ಕಡ್ಡಾಯ
* ಪಕ್ಷಿಧಾನದಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ ಇತ್ಯಾದಿಗಳನ್ನು ಮುಟ್ಟಬಾರದು
* ಪಕ್ಷಿಧಾನದಲ್ಲಿ ಸೂಚಿಸಿದ ಮಾರ್ಗಗಳಲ್ಲೇ ಪ್ರವಾಸಿಗರು ಚಲಿಸಬೇಕು
* ಪ್ರವಾಸಿಗರು ಪಾನ್‌ಮಸಾಲ, ಗುಟ್ಕಾ ಇತ್ಯಾದಿ ಸೇವಿಸಬಾರದು. ಎಲ್ಲೆಂದರಲ್ಲಿ ಉಗುಳಬಾರದು, ಸ್ವಚ್ಛತೆ ಕಾಪಾಡಬೇಕು

× Chat with us