ಹೊಸ ಮನೆ ಮಾರಾಟಕ್ಕೆ ಮುಂದಾದ್ರ ರಮೇಶ್‌ ಜಾರಕಿಹೊಳಿ?

ಬೆಂಗಳೂರು: ತಮಗೆ ಎದುರಾಗಿರುವ ಸಂಕಷ್ಟಗಳಿಗೆ ಹೊಸ ಮನೆಯ ವಾಸ್ತು ದೋಷ ಎಂದು ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಮನೆ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಸದಾಶಿವನಗರದಲ್ಲಿ ಒಂದೂವರೆ ವರ್ಷದ ಹಿಂದೆ ಮನೆ ಖರೀದಿಸಿದ್ದರು. ಮನೆ ಪ್ರವೇಶಿಸಿದಾಗಿನಿಂದ ಅವರಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದ್ದು, ಮನೆ ಮಾರಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಈ ಮನೆಯನ್ನು 30 ಕೋಟಿ ರೂ.ಗೆ ಖರೀದಿಸಿದ್ದರು ಎನ್ನಲಾಗಿದೆ.

× Chat with us