ಟಾಲಿವುಡ್ ಡ್ರಗ್ ಕೇಸ್: ದಗ್ಗುಬಾಟಿ, ರಾಕುಲ್ ಸೇರಿ 12 ಮಂದಿಗೆ ಕಂಟಕ

ಹೈದರಾಬಾದ್: ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಮತ್ತೆ ಜೀವಬಂದಿದ್ದು, ಟಾಲಿವುಡ್‌ನ ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಸೇರಿದಂತೆ ಒಂದು ಡಜನ್ ತಾರೆಯರು ಮತ್ತು ನಿರ್ದೇಶಕರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.

ರವಿ ತೇಜ, ಚಾರ್ಮಿ ಕೌರ್, ನವದೀಪ್, ಮುಮೈತ್ ಖಾನ್, ತಾನಿಷ್, ನಂದು, ತರುಣ್ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರಿಗೂ ಇಡಿ ಸಮನ್ಸ್ ನೀಡಿದೆ. ಟಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆ ಮಾದಕ ವಸ್ತು ಸಾಗಣೆ ಮತ್ತು ಸೇವನೆ ಪ್ರಕರಣಗಳನ್ನು ದಾಖಲಿಸಿತ್ತು.

ರಾಕುಲ್‌ಗೆ ಸೆ.6, ದಗ್ಗುಬಾಟಿಗೆ ಸೆ.೮ ಮತ್ತು ರವಿಗೆ ಸೆ.9ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇವರ ವಿರುದ್ಧ ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆ 12 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 11 ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ.

× Chat with us