ಕಮಲ್ ಹಾದಿ ಹಿಡಿದ ರಜನಿ… ಡಿ.31ರಂದು ಹೊಸ ಪಕ್ಷ ಘೋಷಿಸಲಿರುವ ತಲೈವಾ

ಚೆನ್ನೈ: ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ತಮ್ಮ ಬಹು ನಿರೀಕ್ಷಿತ ರಾಜಕೀಯ ಪಕ್ಷವನ್ನು ಇದೇ ಡಿಸೆಂಬರ್‌ 31 ರಂದು ಘೋಷಿಸಲಿದ್ದು, ಜನವರಿಯಲ್ಲಿ ಪಕ್ಷವು ಜಾರಿಯಾಗಲಿದೆ.

ʻರಜನಿ ಮಕ್ಕಲ್‌ ಮಂದ್ರಂʼ ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ರಜನಿಕಾಂತ್‌ ರಾಜಕೀಯ ಪ್ರವೇಶ ಕುರಿತು ಮಾತನಾಡಿದ್ದಾರೆ. ʻಶೀಘ್ರವೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆʼ ಎಂದು ಬುಧವಾರ ರಜನಿಕಾಂತ್‌ ಸ್ಪಷ್ಟಪಡಿಸಿದ್ದಾರೆ.

ʻಜಿಲ್ಲಾ ಕಚೇರಿ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ. ನನ್ನ ನಿರ್ಧಾರವನ್ನು ಆದಷ್ಟು ಬೇಗವೇ ತಿಳಿಸುತ್ತೇನೆʼ ಎಂದು ರಜನಿಕಾಂತ್‌ ಪ್ರತಿಕ್ರಿಯಿಸಿದ್ದಾರೆ.

× Chat with us