ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ರಾಜೇಂದ್ರ ಬಾದಾಮ್‌ಕರ್‌ ನೇಮಕ

ಬೆಂಗಳೂರು: ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ರಾಜೇಂದ್ರ ಬಾದಾಮ್‌ಕರ್‌ ಅವರನ್ನು ಸುಪ್ರೀಂಕೋರ್ಟ್ ನೇಮಕ ಮಾಡಿದೆ.

ರಾಜೇಂದ್ರ ಅವರು ಪ್ರಸ್ತುತ ರಿಜಿಸ್ಟರ್ ಜನರಲ್‌ ಆಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಮೈಸೂರು, ಕೋಲಾರ ಹಾಗೂ ತುಮಕೂರು ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು.

ಇವರು ಸ್ವಗ್ರಾಮ ಬಾಗಲಕೋಟೆ ಜಿಲ್ಲೆಯ ರಬಕಕವಿ ಗ್ರಾಮದವರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಇವರು ಅತ್ಯಂತ ಖಡಕ್ ಎಂದೇ ಖ್ಯಾತರಾಗಿದ್ದಾರೆ.

× Chat with us