ಟ್ವಿಟರ್‌ ಆಯ್ತು ಈಗ ಫೇಸ್‌ಬುಕ್‌ನಲ್ಲೂ ರಾಹುಲ್ ಫೋಸ್ಟ್ ಡಿಲೀಟ್

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಫೇಸ್‌ಬುಕ್‌ನಿಂದಲೂ ಮುಖಭಂಗವಾಗಿದೆ. ಅತ್ಯಾಚಾರ ಸಂತ್ರಸ್ತೆ ಕುಟುಂಬದ ಜೊತೆ ತಾವು ಇರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದರು. ಈಗ ಅದನ್ನು ಫೇಸ್‌ಬುಕ್ ಅಳಿಸಿ ಹಾಕಿದೆ.

ರಾಹುಲ್ ಸಂದೇಶವು ಸಾಮಾಜಿಕ ಮಾಧ್ಯಮ ತಾಣಗಳ ನೀತಿಯನ್ನು ಉಲ್ಲಂಘಿಸಿದೆ ಎಂದು ಎಫ್‌ಬಿ ಹೇಳಿದೆ. ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಿಂದ ಸಂದೇಶ ಅಳಿಸಿ ಹಾಕುವಂತೆ ಕೆಲವು ದಿನಗಳ ಹಿಂದೆ ಅವರಿಗೆ ಸೂಚಿಸಲಾಗಿತ್ತು.

ಅತ್ಯಾಚಾರ ಸಂತ್ರಸ್ತೆ ಕುಟುಂಬದವರ ಜೊತೆಗಿನ ಫೋಟೋ ಪೋಸ್ಟ್ ಮಾಡಿದ್ದಕ್ಕೆ ಇತ್ತೀಚೆಗೆ ಟ್ವಿಟರ್ ಕೂಡ ರಾಹುಲ್ ಖಾತೆಯನ್ನು ಸ್ಥಗಿತಗೊಳಿಸಿತ್ತು.

× Chat with us