ಕುಮಾರಸ್ವಾಮಿ ಅವರದು ಅವಕಾಶವಾದಿ ರಾಜಕಾರಣ: ಆರ್‌.ಧ್ರುವನಾರಾಯಣ ಟೀಕೆ

ಮೈಸೂರು: ಎಚ್.ಡಿ.ಕುಮಾರಸ್ವಾಮಿ ಅವರು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಆರ್‌.ಧ್ರುವನಾರಾಯಣ ಟೀಕಿಸಿದರು.

ನಗರದ ಜಲದರ್ಶಿನಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಮಾತನಾಡಿದ ಅವರು, ಎಚ್‌ಡಿಕೆ ಅವರಿಗೆ ಕಾಂಗ್ರೆಸ್‌ ಎಂದಿಗೂ ದ್ರೋಹ ಮಾಡಿಲ್ಲ. ಕಾಂಗ್ರೆಸ್‌ ಬೆಂಬಲದಿಂದಲೇ ಅವರು ಸಿಎಂ ಆಗಿದ್ದು, ಅದನ್ನು ಮನವರಿಕೆ ಮಾಡಿಕೊಳ್ಳಬೇಕು. ವಿಧಾನಸಭಾ ಚುನಾವಣೆಯಲ್ಲಿ ಜಾ.ದಳ ಪಕ್ಷಕ್ಕೆ ಕಾಂಗ್ರೆಸ್‌ ಹೆಚ್ಚು ಸಹಾಯ ಮಾಡಿತು. ಆದರೆ, ಕಾಂಗ್ರೆಸ್ಸಿಗರ ವಿಶ್ವಾಸ ಗಳಿಸುವಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಫಲರಾದರು.

× Chat with us