ಪುಷ್ಕರ್ ಸಿಂಗ್ ಧಮಿ ಉತ್ತರಾಖಂಡ್ ಹೊಸ ಸಿಎಂ

ಡೆಹ್ರಾಡೂನ್: ತೀರಥ್ ಸಿಂಗ್ ರಾವತ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರು ದಿನವೇ ಬಿಜೆಪಿ ಶಾಸಕ ಪುಷ್ಕರ್ ಸಿಂಗ್ ಧಮಿ ಅವರೇ ಉತ್ತರಾಖಂಡ್‌ನ ನೂತನ ಸಿಎಂ ಎಂದು ಘೋಷಿಸಲಾಗಿದೆ.

ಇಂದು ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿತ್ತು. ಪಕ್ಷದ ನಾಯಕರು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತೀರಥ್ ಸಿಂಗ್ ರಾವತ್ ಅವರು ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದರು. ಕಳೆದ ಮಾರ್ಚ್‌ನಲ್ಲಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಹೊಸ ಬದಲಾವಣೆಯಂತೆ ಪುಷ್ಕರ್ ಸಿಂಗ್ ಅವರು ಉತ್ತರಾಖಂಡ್‌ನ ೫೭ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ೪೫ ವರ್ಷದ ಪುಷ್ಕರ್ ಸಿಂಗ್ ಅವರು ಖಟಿಮಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

× Chat with us