ಸಾಹಸ ಸಿಂಹನ ಪುತ್ಥಳಿ ಧ್ವಂಸ ಖಂಡಿಸಿ ಪ್ರತಿಭಟನೆ

ಮೈಸೂರು: ಮಾಗಡಿ ರಸ್ತೆಯಲ್ಲಿ ನಟ ಡಾ. ವಿಷ್ಣುವರ್ಧನ್‌ ಪ್ರತಿಮೆ ಧ್ವಂಸಗೊಳಿಸಿರುವ ಘಟನೆ ಖಂಡಿಸಿ ವಿಷ್ಣು ಅಭಿಮಾನಿಗಳು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಗನ್ಮೋಹನ ಅರಮನೆ ಮುಂಭಾಗ ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿದ ಅಭಿಮಾನಿಗಳು,
ಪದೇ ಪದೆವಿಷ್ಣುವರ್ಧನ್ ವಿಚಾರದಲ್ಲಿ ನೋವುಂಟು ಮಾಡುತ್ತಿರುವುದು ಸರಿಯಲ್ಲ. ಪುತ್ಥಳಿ ಸ್ಥಳಾಂತರಿಸಬಹುದಿತ್ತು ಬದಲಾಗಿ ಈ ರೀತಿಯ ಕೃತ್ಯ ಎಸಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಷ್ಣು ಪುತ್ಥಳಿಗಳಿಗೆ ಭದ್ರತೆ ಕೊಡಬೇಕು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಷ್ಣು ಅವರ ಅಭಿಮಾನಿಗಳಿಗೆ ಮತ್ತೆ ಮತ್ತೆ ನೋವಾಗುವ ಸಂಗತಿಗಳು ನಡೆಯುತ್ತಲೇ ಇವೆ. ಮುಂದಿನ ದಿನಗಳಲ್ಲದರೂ ಸರ್ಕಾರ ಕಡಿವಾಣ ಹಾಕಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

× Chat with us