ಚಾ.ನಗರ ಆಕ್ಸಿಜನ್‌ ದುರಂತದ ತಪ್ಪಿತಸ್ಥರಿಗೆ ಸರ್ಕಾರದ ರಕ್ಷಣೆ: ಆರ್‌.ಧ್ರುವನಾರಾಯಣ ಆರೋಪ

ಚಾಮರಾಜನಗರ: ಜಿಲ್ಲಾಸ್ಪತ್ರೆಯ ಆಮ್ಲಜನಕ ದುರಂತ ಪ್ರಕರಣದ ತಪ್ಪಿತಸ್ಥರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಗಂಭೀರ ಆರೋಪ ಮಾಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತಪ್ಪಿತಸ್ಥರ ಪರ ಇದೆ. ಇದು ತಾತ್ಕಾಲಿಕ ರಕ್ಷಣೆ ಅಷ್ಟೇ. ನ್ಯಾಯಾಲಯದಿಂದ ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಈಗಾಗಲೇ ಹೈಕೋರ್ಟ್ ನೇಮಿಸಿದ್ದ ಸಮಿತಿ ನೀಡಿರುವ ವರದಿಯಲ್ಲಿ ಜಿಲ್ಲಾಡಳಿತ ವೈಫಲ್ಯಗಳನ್ಮು ಎತ್ತಿಹಿಡಿದಿದೆ. ಸಿಎಂ ಆದವರು ಸ್ವತಃ ಚಾಮರಾಜನಗರಕ್ಕೆ ಬಂದು ನೊಂದವರಿಗೆ ಪರಿಹಾರ ನೀಡಿ ಸಾಂತ್ವನ ಹೇಳಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕಿತ್ತು. 36 ಜನ ಸತ್ತಿದ್ದರು ಸಹ ಇವರಿಗೆ ಮಾನವೀಯತೆ ಇಲ್ಲ, ಸರ್ಕಾರದಲ್ಲಿ ಮನುಷ್ಯತ್ವದ ಗುಣಗಳು ಯಾರಿಗೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

× Chat with us