ಓಮಿಕ್ರಾನ್ ಗೆ ಹೆದರಿ ಪತ್ನಿ, ಇಬ್ಬರು ಮಕ್ಕಳ ಕೊಂದು ಪೊಫೆಸರ್ ಪರಾರಿ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಧಿವಿಜ್ಞಾನ ಹಿರಿಯ ಪ್ರೊಫೆಸರ್ ಒಬ್ಬರು ಕೊರೊನಾದ ಹೊಸ ತಳಿ ಒಮಿಕ್ರಾನ್‌ಗೆ ಹೆದರಿ ತಮ್ಮ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಕೊಂದು ಪರಾರಿಯಾದ ಆಘಾತಕಾರಿ ಘಟನೆ ನಡೆದಿದೆ.

ಕಾನ್ಪುರದ ಕಲ್ಯಾಣಪುರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಆಗಿದ್ದಾನೆ. ಪತ್ನಿಯನ್ನು ಕತ್ತು ಕೊಯ್ದು ಹತ್ಯೆ ಮಾಡಿದ ಇವರು, ಪುಟ್ಟ ಮಗ ಮತ್ತು ಮಗಳ ತಲೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಂದಿದ್ದಾರೆ. ಅದಾದ ಮೇಲೆ ಮನೆಯಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರೊಫೆಸರ್ ಈ ಭೀಕರ ಕೃತ್ಯ ಎಸಗಿ ಮನೆಯಿಂದ ಓಡಿಹೋಗುವಾಗ ವಾಟ್ಸ್‌ಆ್ಯಪ್ ಮೂಲಕ ತನ್ನ ಸಹೋದರನಿಗೆ ತಿಳಿಸಿದ್ದಾನೆ.

ಒಮಿಕ್ರಾನ್‌ನಿಂದ ಯಾರೂ ಪಾರಾಗಲು ಸಾಧ್ಯವಿಲ್ಲ. ಯಾರನ್ನೂ ಈ ಸೋಂಕು ಬಿಡುವುದಿಲ್ಲ ಎಂದೂ ವಾಟ್ಸ್‌ಆ್ಯಪ್ ಮೆಸೇಜ್‌ನಲ್ಲಿ ಉಲ್ಲೇಖಿಸಿದ್ದಾನೆ. ಸಂದೇಶ ನೋಡುತ್ತಿದ್ದಂತೆಯೇ ಪ್ರೊಫೆಸರ್‌ನ ಸೋದರ ಅವರ ಮನೆಗೆ ಹೋಗಿ ಬಾಗಿಲು ಮುರಿದಿದ್ದಾರೆ. ಒಳಗೆ ಹೋದರೆ ಅಲ್ಲಿ ನಾದಿನಿ ಮತ್ತು ಮಕ್ಕಳ ಶವವಿತ್ತು. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಮ್ಮ ವಿಧಿವಿಜ್ಞಾನ ತಂಡ ಮತ್ತು ಶ್ವಾನದಳದೊಂದಿಗೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.

× Chat with us