BREAKING NEWS

‘ಹೆಣ್ಣುಮಕ್ಕಳು ತುಂಡುಡುಗೆ ಹಾಕಿಕೊಂಡರೆ ಮಾತ್ರವೇ ಸಮಸ್ಯೆ’ : ತೆಲಂಗಾಣ ಗೃಹ ಸಚಿವ ಮೊಹಮದ್‌ ಅಲಿ ವಿವಾದಾತ್ಮಕ ಹೇಳಿಕೆ

ಹೈದರಾಬಾದ್‌ : ತೆಲಂಗಾಣದ ಗೃಹ ಸಚಿವ ಮೊಹಮದ್‌ ಅಲಿ ಶನಿವಾರ ಮಹಿಳೆಯರ ಡ್ರೆಸ್‌ ಕೋಡ್‌ ಬಗ್ಗೆ ಕಾಮೆಂಟ್‌ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಶುಕ್ರವಾರ ಹೈದರಾಬಾದ್‌ನ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ತೆರಳಿದ್ದ ಮಹಿಳಾ ವಿದ್ಯಾರ್ಥಿಗಳಿಗೆ ಬುರ್ಖಾ ತೆಗೆದು ಒಳಹೋಗುವಂತೆ ಸೂಚಿಸಲಾಗಿತ್ತು. ಇದು ವಿವಾದವಾದ ಹಿನ್ನಲೆಯಲ್ಲಿ ಈ ಘಟನೆಯ ಬಗ್ಗೆ ಮೊಹಮದ್‌ ಅಲಿ ಪ್ರತಿಕ್ರಿಯೆ ನೀಡುವ ವೇಳೆ ವಿವಾದಿತ ಮಾತನ್ನಾಡಿದ್ದಾರೆ.

ಹೈದರಾಬಾದ್‌ನ ಕೆವಿ ರಂಗಾರೆಡ್ಡಿ ಮಹಿಳೆಯರ ಪದವಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆ ಬರೆಯಲು ಶುಕ್ರವಾರ ಅವರು ಕಾಲೇಜಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ಅವರನ್ನು ತಡೆದ ಪರೀಕ್ಷಾ ಅಧಿಕಾರಿಗಳು ಬುರ್ಖಾ ತೆಗೆದು ಪ್ರವೇಶಿಸುವಂತೆ ಹೇಳಿದ್ದರು. ಇದು ವಿವಾದವಾಗಿತ್ತು. ಕೊನೆಗೆ ವಿದ್ಯಾರ್ಥಿನಿಯರು ಬುರ್ಖಾ ತೆಗೆದ ನಂತರ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿತ್ತು. ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದ ಮೊಹಮದ್‌ ಅಲಿ, ಮಹಿಳೆಯರು ಎಷ್ಟು ಸಾಧ್ಯವೋ ಅಷ್ಟು ತಮ್ಮನ್ನು ತಾವು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಕೆವಿ ರಂಗಾ ರೆಡ್ಡಿ ಮಹಿಳೆಯರು ತುಂಡುಡುಗೆ ತೊಟ್ಟರೆ ಮಾತ್ರವೇ ಸಮಸ್ಯೆಗಳು ಎದುರಾಗುತ್ತವೆ ಎಂದಿದ್ದಾರೆ.

ಮಹಿಳೆಯರು ತಮ್ಮ ಮೈಮೇಲೆ ಹೆಚ್ಚಿನ ಬಟ್ಟೆಗಳನ್ನು ಹಾಕಿಕೊಂಡರೆ, ಜನರು ಆರಾಮವಾಗಿ ಇರುತ್ತಾರೆ. ಎಲ್ಲೂ ಕೂಡ ಬುರ್ಖಾವನ್ನು ಧರಿಸಬಾರದು ಎಂದು ಹೇಳಿಲ್ಲ. ಈ ಕುರಿತು ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

“ನಮ್ಮ ನೀತಿಯು ಸಂಪೂರ್ಣ ಜಾತ್ಯತೀತ ನೀತಿಯಾಗಿದೆ. ಎಲ್ಲರಿಗೂ ತನಗೆ ಬೇಕಾದುದನ್ನು ಧರಿಸುವ ಹಕ್ಕಿದೆ. ಆದರೆ, ಹಿಂದೂ ಅಥವಾ ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ಉಡುಗೆ ಧರಿಸುವುದನ್ನು ಅಭ್ಯಾಸ ಮಾಡಬೇಕು ಮತ್ತು ಯುರೋಪಿಯನ್ ಸಂಸ್ಕೃತಿಯನ್ನು ಅನುಸರಿಸಬಾರದು. ನಮ್ಮ ಬಟ್ಟೆಗಳು ಇಲ್ಲಿನ ಸಂಸ್ಕೃತಿಯನ್ನು ಗೌರವಿಸಬೇಕು. ಅದರಲ್ಲೂ ಮಹಿಳೆಯರು ಗಿಡ್ಡ ಡ್ರೆಸ್‌ಗಳನ್ನು ಧರಿಸಬಾರದು ಮತ್ತು ಸಾಧ್ಯವಾದಷ್ಟು ಕವರ್‌ ಮಾಡಿಕೊಳ್ಳಬೇಕು” ಎಂದು ಅಲಿ ಹೇಳಿದ್ದಾರೆ. ನಾವು ಸಮಸ್ಯೆಯನ್ನು ಪರಿಶೀಲಿಸುತ್ತೇವೆ ಮತ್ತು ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಆಗಿದ್ದೇನು : ಕೆವಿ ರಂಗಾರೆಡ್ಡಿ ಕಾಲೇಜಿನಲ್ಲಿ ಸುಮಾರು ಅರ್ಧ ಗಂಟೆ ಕಾಲ ಪರೀಕ್ಷಾ ಕೊಠಡಿಯ ಹೊರಗೆ ಕಾಯುವಂತೆ ನಮಗೆ ಹೇಳಲಾಗಿತ್ತು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದು ಕೊನೆಗೆ ಪರೀಕ್ಷೆಗೆ ಹಾಜರಾಗಲು ಬುರ್ಖಾ ತೆಗೆಯಬೇಕಾಯಿತು ಎಂದಿದ್ದಾರೆ. ನಾಳೆಯಿಂದ ಪರೀಕ್ಷೆ ಸಮಯದಲ್ಲಿ ಬುರ್ಖಾ ಧರಿಸದಂತೆ ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದು ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ನಮ್ಮ ಪೋಷಕರು ಗೃಹ ಸಚಿವ ಮಹಮೂದ್ ಅಲಿ ಅವರಿಗೆ ದೂರು ನೀಡಿದ್ದಾರೆ. ಬುರ್ಖಾ ಧರಿಸಿದ ವಿದ್ಯಾರ್ಥಿನಿಯರನ್ನು ಕೇಂದ್ರದೊಳಗೆ ಬಿಡದಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

lokesh

Recent Posts

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…

3 hours ago

ಓದುಗರ ಪತ್ರ: ಶಾಂತಿ, ಸೌಹಾರ್ದ ಸಭೆಗಳು ಹೆಚ್ಚು ಹೆಚ್ಚು ನಡೆಯಲಿ

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…

3 hours ago

ಓದುಗರ ಪತ್ರ: ಶ್ರೇಷ್ಠ ಕಾರ್ಮಿಕ ಧುರೀಣ ಅನಂತ ಸುಬ್ಬರಾವ್

ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…

3 hours ago

ಬಾಪೂಜಿ ನೆನಪಲ್ಲಿ; ಖಾದಿ ಕೇಂದ್ರದ ಅಂಗಳದಲ್ಲಿ…

ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ  ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…

3 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಚುನಾವಣೆ, ಚಿತ್ರನಗರಿ, ಒಟಿಟಿ ವರ್ತಮಾನ

ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…

4 hours ago

ಚಳಿ ಇರುವಾಗಲೇ ದಿನಕ್ಕೊಂದು ‘ಅಗ್ನಿ ಕರೆ’

ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ…

4 hours ago