ರಾಷ್ಟ್ರಪ್ರೇಮದ ವೇಷ ತೊಟ್ಟು ತಾಲಿಬಾನಿಗಳಂತೆ ವರ್ತಿಸೋರಿಂದ ಮಹಿಷ ದಸರಾಗೆ ವಿರೋಧ: ಮಹೇಶ್‌ಚಂದ್ರ ಗುರು ಟೀಕೆ

ಮೈಸೂರು: ರಾಷ್ಟ್ರಪ್ರೇಮದ ವೇಷ ತೊಟ್ಟು ತಾಲಿಬಾನಿಗಳಂತೆ ವರ್ತಿಸುತ್ತಿರುವವರು ಮಹಿಷ ದಸರಾ ವಿರೋಧಿಸುತ್ತಿದ್ದಾರೆ. ಇದರಿಂದ ದಕ್ಷಿಣ ದೇಶ ಉದ್ಧಾರ ಆಗುವುದಿಲ್ಲ ಎಂದು ಪ್ರೊ. ಬಿ.ಪಿ.ಮಹೇಶ್‌ಚಂದ್ರ ಗುರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಷ ದಸರಾ ನಿಲ್ಲಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿರುವವರು ಸಂಸ್ಕೃತಿ ವಿರೋಧಿಗಳು. ಅವರು ತಾಲಿಬಾನಿಗಳಿಗೆ ಸಮಾನ ಎಂದು ಹರಿಹಾಯ್ದರು.

ಅಫ್ಗಾನ್‌ನಲ್ಲಿ ಸರ್ಕಾರ, ಸಂವಿಧಾನ ಹೋದ ಮೇಲೆ ಜನರು ರಕ್ಷಣೆಯಿಲ್ಲದೇ ಸಾಯುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನಗಳಾಗುತ್ತಿದೆ. ಆದರೆ, ಭಾರತದ ತಾಲಿಬಾನಿಗಳು, ನಮ್ಮ ದೇಶದಲ್ಲಿ ಮತ್ತೊಂದು ತಾಲಿಬಾನ್‌ ಸಂಸ್ಕೃತಿ ಹುಟ್ಟುಹಾಕಲು ಹೊರಟಿದ್ದಾರೆ. ಹಾಗಾಗಿ, ನಾವು ಪ್ರಾಣತ್ಯಾಗ ಮಾಡಿದರೂ ಸರಿಯೇ ಸಂವಿಧಾನ ಉಳಿಸೋಣ ಎಂದು ಕರೆ ನೀಡಿದರು.

ಇದೇ ವೇಳೆ ಮಂಗಳಾ ಸೋಮಶೇಖರ್‌ ಹೇಳಿಕೆ ವಿರುದ್ಧ ಹರಿಹಾಯ್ದರು.

× Chat with us