ಕಲಬುರಗಿ : ಚಿತ್ತಾಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸೋಮವಾರ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರ ಆಸ್ತಿ ₹ 10.29 ಕೋಟಿ ಇದೆ. ಅವರ ಪತ್ನಿ ಶ್ರುತಿ ಖರ್ಗೆ ಅವರ ಹೆಸರಿನಲ್ಲಿ ₹ 72.38 ಲಕ್ಷದ ಆಸ್ತಿ ಇದೆ.
ಜಂಟಿಯಾಗಿ ₹ 96.96 ಲಕ್ಷ ಮೌಲ್ಯದ ಆಸ್ತಿಗಳಿವೆ. ಪುತ್ರ ಅಮಿತಾವ್ ಹೆಸರಿನಲ್ಲಿ ₹ 25.39 ಲಕ್ಷ, ಕಿರಿಯ ಪುತ್ರ ಅಕಾಂಕ್ಷ್ ಹೆಸರಿನಲ್ಲಿ ₹ 4.52 ಲಕ್ಷದ ಆಸ್ತಿಗಳಿವೆ.
ಪ್ರಿಯಾಂಕ್ ಅವರು ಗ್ರಾವಿಟಾಸ್ ಎಸ್ಟೇಟ್ಸ್, ಗ್ರಾವಿಟಾಸ್ ಇನ್ವೆಸ್ಟ್‌ಮೆಂಟ್ಸ್, ಟ್ರಿಪಲ್ ಜೆಮ್ ಪಾಲಿಪ್ಯಾಕ್ಸ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಯುಟಿಐ ಸಂಸ್ಥೆಯ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಿದ್ದಾರೆ. 2016ರಲ್ಲಿ ಹೋಂಡಾ ಸಿಆರ್‌ವಿ ಕಾರನ್ನು ಖರೀದಿ ಮಾಡಿದ್ದು, ಇದರ ಮೌಲ್ಯ ₹ 29.52 ಲಕ್ಷ. ₹ 32.50 ಲಕ್ಷ ಮೌಲ್ಯದ 650 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಥೌಟ್ ಕ್ಲೌಡ್ ಸ್ಟುಡಿಯೊ ಎಲ್‌ಎಲ್‌ಪಿಯಲ್ಲಿ ₹ 1.06 ಕೋಟಿ ಮೌಲ್ಯದ ಮೂಲ ಬಂಡವಾಳ ಹೂಡಿಕೆ ಮಾಡಿದ್ದಾರೆ.
ಬೆಂಗಳೂರಿನ ಆರ್.ಟಿ. ನಗರದಲ್ಲಿ ₹ 1.67 ಕೋಟಿ ಮೌಲ್ಯದ ಕಟ್ಟಡವಿದೆ. ಅರಮನೆ ರಸ್ತೆಯಲ್ಲಿ ₹ 1.02 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆ ಇದೆ. ಕೆ.ಆರ್. ಪುರಂ ಹೋಬಳಿಯ ರಾಚೇನಹಳ್ಳಿಯಲ್ಲಿ ₹ 2.44 ಕೋಟಿ ಮೌಲ್ಯದ ಆಸ್ತಿ ಇದೆ. ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿಯಲ್ಲಿ ₹ 1.34 ಕೋಟಿ ಮೌಲ್ಯದ 46.28 ಎಕರೆ ಜಮೀನಿದೆ.
ಮಾನ ಹಾನಿ, ಮುಖ್ಯಮಂತ್ರಿಗಳ ಮನೆ ಎದುರು ಪ್ರತಿಭಟನೆ, ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ನಡೆಸಿದ ಆರೋಪದ ಮೇರೆಗೆ ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…
ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…
ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…
ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…
ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…
ವಾಷಿಂಗ್ಟನ್ : ಇರಾನ್ ವಿರುದ್ಧದ ಯುದ್ಧದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಸುಂಕ ಸಮರ ಆರಂಭಿಸಿದ್ದಾರೆ.…