BREAKING NEWS

ನವರಾತ್ರಿಗೆ ವಿಶೇಷ ‘ಗರ್ಬೊ’ ಗೀತೆಗೆ ಸಾಹಿತ್ಯ ರಚಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಈಗ ಗೀತ ರಚನೆಕಾರರಾಗಿದ್ದಾರೆ! ಬರವಣಿಗೆ ಮೇಲಿನ ಆಸಕ್ತಿಯನ್ನು ಅವರು ನವರಾತ್ರಿ ಹಾಡಿನ ಮೂಲಕ ಪ್ರದರ್ಶಿಸಿದ್ದಾರೆ. ‘ಗರ್ಬೊ’ ಎಂಬ ಶೀರ್ಷಿಕೆಯ ಹಬ್ಬದ ಹಾಡನ್ನು ಪ್ರಧಾನಿ ಮೋದಿ ರಚಿಸಿದ್ದಾರೆ. ಈ ಹಾಡನ್ನು ಗಾಯಕಿ ಧ್ವನಿ ಭಾನುಶಾಲಿ ಹಾಡಿದ್ದಾರೆ. ತನಿಷ್ಕ್ ಬಗ್ಚಿ ಸಂಗೀತ ನಿರ್ದೇಶನದ, ಜಾಕಿ ಭಗ್ನಾನಿ ನಿರ್ಮಾಣದ ಗೀತೆ ಎಲ್ಲರ ಗಮನ ಸೆಳೆದಿದೆ.

ಹೊಸ ನವರಾತ್ರಿ ಗೀತೆ ‘ಗರ್ಬೊ’ದ ಸಾಹಿತ್ಯವನ್ನು ಪ್ರಧಾನಿ ಮೋದಿ ಬರೆದಿದ್ದಾರೆ. ನವರಾತ್ರಿ ಸಂದರ್ಭದಲ್ಲಿನ ಏಕತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಮತ್ತು ಹಬ್ಬದ ಚಟುವಟಿಕೆಗಳ ಕುರಿತು ಈ ಹಾಡಿನಲ್ಲಿ ಬಣ್ಣಿಸಿದ್ದಾರೆ. ಈ ಹಾಡಿಗೆ ದನಿಯಾಗಿರುವ ಧ್ವನಿ ಭಾನುಶಾಲಿ, ವಿಡಿಯೋದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಶನಿವಾರ ಈ ಹಾಡು ಬಿಡುಗಡೆಯಾಗಿದ್ದು, ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://x.com/narendramodi/status/1713063193592086899?s=20

‘ಗರ್ಬೊ’ ಹಾಡಿನ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಗಾಯಕಿ ಧ್ವನಿ ಭಾನುಶಾಲಿ, ಸಂಗೀತ ನಿರ್ದೇಶಕ ತನಿಷ್ಕ್ ಬಗ್ಚಿ ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ ಸ್ಥಾಪಿಸಿದ ಜಸ್ಟ್ ಮ್ಯೂಸಿಕ್‌ನ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

“ನಾನು ಕೆಲವು ವರ್ಷಗಳ ಹಿಂದೆ ಬರೆದ ಗರ್ಬಾದ ಈ ಸುಂದರ ಅರ್ಪಣೆಗಾಗಿ ಧ್ವನಿ ಭಾನುಶಾಲಿ, ತನಿಷ್ಕ್ ಬಗ್ಚಿ ಹಾಗೂ ಜಸ್ಟ್ ಮ್ಯೂಸಿಕ್ ತಂಡಕ್ಕ ಧನ್ಯವಾದಗಳು. ಇದು ಅನೇಕ ನೆನಪುಗಳನ್ನು ಮರಳಿಸಿದೆ. ನಾನು ಅನೇಕ ವರ್ಷಗಳಿಂದ ಬರೆದಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಲ್ಲಿ ಹೊಸ ಗರ್ಬಾ ಗೀತೆಯನ್ನು ಬರೆಯವುದು ಸಾಧ್ಯವಾಗಿದೆ. ಅದನ್ನು ನಾನು ನವರಾತ್ರಿ ಸಂದರ್ಭದಲ್ಲಿ ಹಂಚಿಕೊಳ್ಳುತ್ತೇನೆ” ಎಂದು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಾಕಿ ಭಗ್ನಾನಿ, “ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಗರ್ಬಾ ಅರ್ಪಣೆಗಾಗಿ ನಿಮ್ಮ ಕರುಣೆಯ ಪದಗಳು ಮತ್ತು ಹೊಗಳಿಕೆಗಾಗಿ ಧನ್ಯವಾದಗಳು. ನಿಮ್ಮ ಬೆಂಬಲದಿಂದ ನಮಗೆ ನಿಜಕ್ಕೂ ಗೌರವ ದೊರಕಿದೆ. ನಿಮ್ಮ ಮಾತುಗಳು ನಮಗೆ ಸ್ಫೂರ್ತಿ ನೀಡಿವೆ. ಇದನ್ನು ಸೃಷ್ಟಿಸಲು ನಿಮ್ಮ ಸ್ಫೂರ್ತಿಯೇ ನಮಗೆ ಪ್ರೇರಣೆ ನೀಡಿದೆ” ಎಂದು ಹೇಳಿದ್ದಾರೆ.

ಈ ಗೀತೆಗೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ ರಣಾವತ್, ಪ್ರಧಾನಿ ಮೋದಿ ಅವರು ಸ್ಫೂರ್ತಿದಾಯಕರು ಎಂದು ಶ್ಲಾಘಿಸಿದ್ದಾರೆ. “ಎಷ್ಟು ಸುಂದರ, ಅಟಲ್‌ (ವಾಜಪೇಯಿ) ಅವರ ಪದ್ಯಗಳು ಇರಬಹುದು ಅಥವಾ ನರೇಂದ್ರ ಮೋದಿ ಅವರ ಹಾಡುಗಳು/ ಪದ್ಯಗಳು ಮತ್ತು ಕಥೆ ಹೇಳುವಿಕೆಯು, ನಮ್ಮ ದಿಟ್ಟ ಹೀರೋಗಳು ಕಲೆಯ ಸೌಂದರ್ಯ ಹಾಗೂ ಸೊಬಗಿನಲ್ಲಿ ಭಾಗಿಯಾಗುವುದನ್ನು ನೋಡುವುದು ಯಾವಾಗಲೂ ಹೃದಯಸ್ಪರ್ಶಿಯಾಗಿರುತ್ತದೆ. ನವರಾತ್ರಿ 2023 ಗರ್ಬಾ, ಎಲ್ಲಾ ಕಲಾವಿದರಿಗೂ ಬಹಳ ಸ್ಫೂರ್ತಿದಾಯಕ” ಎಂದು ಹೇಳಿದ್ದಾರೆ.

andolanait

Recent Posts

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ

ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…

2 hours ago

ಹಲವು ಹೊಸ ದಾಖಲೆಗಳಿಗೆ ಷರಾ ಬರೆದ 2025

ಗಿರೀಶ್‌ ಹುಣಸೂರು  ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…

2 hours ago

ಸಫಾರಿ ನಿರ್ಬಂಧ: ಮೈಸೂರಿನತ್ತ ಪ್ರವಾಸಿಗರ ದಂಡು

ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…

2 hours ago

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

10 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

14 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

15 hours ago