ಹುಬ್ಬಳ್ಳಿ : ಹು–ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಮುಂದುವರಿಸಿರುವ ಅವರ ಬೆಂಬಲಿಗರು, ಇದೀಗ ರಾಜೀನಾಮೆ ತಂತ್ರದ ಮೊರೆ ಹೋಗಿದ್ದಾರೆ.
ಕ್ಷೇತ್ರದಿಂದ ಮಹಾನಗರ ಪಾಲಿಕೆಗೆ ಆಯ್ಕೆಯಾಗಿರುವ 16 ಬಿಜೆಪಿ ಸದಸ್ಯರು ತಮ್ಮ ಸದಸ್ಯತ್ವಕ್ಕೆ ಹಾಗೂ ಪಕ್ಷದ 49 ಪದಾಧಿಕಾರಿಗಳು ಶುಕ್ರವಾರ ತಮ್ಮ ಹುದ್ದೆಗೆ ಸಾಮೂಹಿಕವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್ ಕಟೀಲ್ ಅವರಿಗೆ ಕಳಿಸಿದ್ದಾರೆ.
ಅದಕ್ಕೂ ಮುಂಚೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು, ಮಯೂರಿ ಗಾರ್ಡನ್‌ನಲ್ಲಿರುವ ಅವರ ನಿವಾಸದಲ್ಲಿ ನಿಯೋಗದ ಸದಸ್ಯರು ಭೇಟಿ ಮಾಡಿದ್ದರು. ‘ಶೆಟ್ಟರ್‌ಗೆ ಟಿಕೆಟ್ ಕೊಡಿಸಬೇಕು’ ಎಂದು ಮನವಿ ಮಾಡಿದ್ದ ಸದಸ್ಯರು, ‘ಒಂದು ವೇಳೆ ಟಿಕೆಟ್ ನೀಡದಿದ್ದರೆ ಎಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು.
ರಾಜೀನಾಮೆ ಸಲ್ಲಿಸಿದವರು : ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರು, ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ಸೀಮಾ ಮೊಗಲಿಶೆಟ್ಟರ, ಸಂತೋಷ ಚವ್ಹಾಣ, ಮಹಾದೇವಪ್ಪ ನರಗುಂದ, ಬೀರಪ್ಪ ಖಂಡೇಕರ, ವೀರಣ್ಣ ಸವಡಿ, ರೂಪಾ ಶೆಟ್ಟಿ, ಕಿಶನ್ ಬೆಳಗಾವಿ, ವೀಣಾ ಭರದ್ವಾಡ, ಸರಸ್ವತಿ ಧೋಂಗಡಿ, ಚಂದ್ರಿಕಾ ಮೇಸ್ತ್ರಿ ಹಾಗೂ ಮೀನಾಕ್ಷಿ ವಂಟಮೂರಿ ಮಹಾನಗರ ಪಾಲಿಕೆಯ ಸದಸ್ವತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಪದಾಧಿಕಾರಿಗಳು : ಪಕ್ಷದ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ, ಮಹಿಳಾ ಮೋರ್ಚಾ ಕಾರ್ಯದರ್ಶಿ ಮೇನಕಾ ಹುರಳಿ, ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಎಂ.ಎಚ್. ಚಳ್ಳಮರದ ಶೇಖ, ಮಹಾನಗರ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ, ಸೆಂಟ್ರಲ್ ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಮುಳ್ಳೊಳ್ಳಿ, ಪ್ರಧಾನ ಕಾರ್ಯದರ್ಶಿ ಕೆ.ಎಚ್. ಮಾಡಳ್ಳಿ, ರಾಜ್ಯ ಪ್ರಕಾಶನ ಪ್ರಕೋಷ್ಠದ ಸದಸ್ಯ ಶ್ರೀನಿವಾಸ ಶಾಸ್ತ್ರಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಇತರ ಪದಾಧಿಕಾರಿಗಳಾದ ವಿರೂಪಾಕ್ಷ ರಾಯನಗೌಡ್ರ, ಮೋಹನ ಬಡಿಗೇರ, ಡಿ.ಪಿ. ಪಾಟೀಲ, ಸದಾಶಿವ ಚೌಶೆಟ್ಟಿ, ಮುಕುಂದಗೌಡ ಗುಗ್ರಿ, ಲೀಲಾವತಿ ಪಾಸ್ತೆ, ರಂಜನ ಬಂಕಾಪುರ, ನಾಗರಾಜ ಮರಾಠೆ, ಹರೀಶ ಜಂಗ್ಲಿ, ಸಂಗೀತಾ ಇಜಾರದ, ಗಂಗಾ ಅಂಗಡಿ, ರಾಜು ಭಂಡಾರಿ, ಮಂಜು ದಲಬಂಜನ, ರವಿ ಕಲಾಲ, ಶಿವಾಜಿ ಪರಪ್ಪನವರ, ಪ್ರವೀಣ ಹುರಳಿ, ರಾಮನಾಥ ಶೆಣೈ, ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ವಿಜಯಲಕ್ಷ್ಮಿ ತಿಮ್ಮೊಲಿ, ನಾಸೀರ ತಂಬೂರಿ, ಮುಸ್ತಾಕ ಕುಂಬಿ, ವಿವೇಕ ಹಳ್ಳಿ, ಅಬ್ದುಲ್ ಐನಾಪುರ, ಕುಮಾರ ಬುರಬುರೆ, ಇರ್ಫಾನ್ ಶೇಕ್, ಆಸೀಫ್ ಸೂರಣಗಿ, ಇಮ್ತಿಯಾಜ್ ಮುಲ್ಲಾ, ಹಟೇಲಸಾಬ ಮುಲ್ಲಾ, ಅಕ್ಕಮ್ಮ ಹೆಗಡೆ, ಕೃಷ್ಣ ಹಂದಿಗೋಳ, ಲಲಿತಾ ಪೂಜಾರಿ, ರತ್ನಾ ಚೌಶೆಟ್ಟಿ, ಜಯಶ್ರೀ ನಿಂಬರಗಿ, ಭಾರತಿ ಟಪಾಲ, ಮೇಘನಾ ಶಿಂಧೆ, ಶೋಭಾ ಪಾಟೀಲ, ಅಕ್ಕಮ್ಮ ಬಾಗೇವಾಡಿ, ಅನ್ನಪೂರ್ಣ ಪಾಟೀಲ, ಸಪ್ನಾ ಶಿಂಧೆ ಹಾಗೂ ಸುಮಾ ಶಿವನಗೌಡ್ರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…