ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್‌

ಕೊಡಗು: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ಭೇಟಿ ನೀಡಿದರು.

ಪತ್ನಿ ಸವಿತಾ ಕೋವಿಂದ್‌ ಅವರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯ ಅರ್ಚಕ ರಾಜೇಶ್ ಆಚಾರ್ಯ, ಸುಧೀರ್ ಆಚಾರ್ಯ ಮತ್ತು ಸಹಾಯಕರಾದ ಅರ್ಚಕ ಅಖಿಲೇಶ್, ಪ್ರಸಾದ್, ಶ್ರೀನಿವಾಸ್ ಅವರು ಪೂಜಾ ಕಾರ್ಯದಲ್ಲಿದ್ದರು.

× Chat with us