ಮಣಿಪುರ ರಾಜ್ಯಪಾಲರಾಗಿ ಲಾ ಗಣೇಶನ್ ನೇಮಕ

ಮಣಿಪುರ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಮಣಿಪುರದ ರಾಜ್ಯಪಾಲರಾಗಿ ಲಾ ಗಣೇಶನ್ ಅವರನ್ನು ನೇಮಿಸಿದ್ದಾರೆ.

ಬಿಜೆಪಿ ರಾಜ್ಯಸಭಾ ಸದಸ್ಯರು ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶನ್​ ಅವರು ಭಾನುವಾರ ಮಣಿಪುರದ 17ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

2016ರಲ್ಲಿ ಮಣಿಪುರದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದ ನಜ್ಮಾ ಹೆಪ್ಟುಲ್ಲಾ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ, ಸಿಕ್ಕಿಂ ರಾಜ್ಯಪಾಲ ಗಂಗಾ ಪ್ರಸಾದ್ ಚೌರಾಸಿಯಾ ಮಣಿಪುರದ ರಾಜ್ಯಪಾಲರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದರು. ಅದಾದ ಒಂದು ವಾರದ ಬಳಿಕ ಲಾ.ಗಣೇಶನ್​ ನೇಮಕಗೊಂಡಿದ್ದಾರೆ.

× Chat with us