ಅಪಘಾತದ ಗಾಯಾಳುಗಳಿಗೆ ನೆರವಾದ ಸಂಸದ ಪ್ರತಾಪ್‌ ಸಿಂಹ

ರಾಮನಗರ: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ರಾಮನಗರ ಹೆದ್ದಾರಿಯಲ್ಲಿ ಪಲ್ಟಿಯಾಗಿದ್ದು,ಗಾಯಾಳುಗಳನ್ನು ಸ್ಥಳದಲ್ಲೇ ಇದ್ದ ಸಂಸದ ಪ್ರತಾಪ್‍ ಸಿಂಹ ಆಸ್ಪತ್ರೆಗೆ ದಾಖಲಿಸಿ ಮಾನವಿಯತೆ ಮೆರೆದಿದ್ದಾರೆ.

ಈ ಘಟನೆ ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ಬಳಿ ನಡೆದಿದೆ. ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಪ್ರತಾಪ್‍ ಸಿಂಹ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿ ಗಾಯಳುಗಳ ನೆರವಿಗೆ ಬಂದು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ಪ್ರತಾಪ್‍ ಸಿಂಹ ಅವರ ಕಾರು ಅಪಘಾತವಾಗಿದೆ ಎಂದು ತಪ್ಪು ಸುದ್ದಿ ಹರಿದಾಡುತ್ತಿದೆ.

× Chat with us