ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರೇ ನೀವು ಬಾಯಿ ಮುಚ್ಕೊಂಡಿರ್ಬೇಕು. ಮಾತಾಡೋಕೆ ನಮಗೂ ಬರ್ತದೆ. ನಿಮಗೆ ನಿಜಕ್ಕೂ ಮಾತನಾಡೋಕೆ ಬರ್ತದೆ ಅಂತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ. ನೀವು ಏನೇನು ಮಾಡಿದ್ದೀರಿ ಅಂತ ಹೇಳಿ, ಸಿದ್ದರಾಮಯ್ಯ ಅವರು ಏನೇನು ಮಾಡಿದ್ದಾರೆ ಅಂತ ನಾನೂ ಹೇಳ್ತೀನಿʼʼ ಎಂದರು ಪ್ರದೀಪ್ ಈಶ್ವರ್. ನೀವು ಎರಡೂ ಚುನಾವಣೆಗಳನ್ನು ಗೆದ್ದಿರುವುದು ಮೋದಿ ಅವರ ಹೆಸರಿನಲ್ಲಿ. ನಿಮ್ಮ ನೆಲೆಯಲ್ಲಿ ನೀವು ಏನು ಸಾಧನೆ ಮಾಡಿದ್ದೀರಿ ಎಂದು ಮೊದಲು ಹೇಳಿ ಎಂದ ಸವಾಲು ಹಾಕಿದರು.