ದೊಡ್ಡಬಳ್ಳಾಪುರ : ಪ್ರದೀಪ್ ಈಶ್ವರ್ ಮೊದಲ ಬಾರಿಗೆ ಶಾಸಕರಾಗಿದ್ದು, ಎರಡನೇ ಹುಚ್ಚ ವೆಂಕಟ್ ರೀತಿ ಆಡುತ್ತಿದ್ದಾರೆ. ಇಂಥ ಡ್ರಾಮಾ ಕಂಪನಿಗಳನ್ನು ತುಂಬಾ ನೋಡಿದ್ದೇನೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಕಿಡಿಕಾರಿದ್ದಾರೆ. ಈ ಮೂಲಕ ತಮ್ಮನ್ನು ಚೈಲ್ಡ್ ಆರ್ಟಿಸ್ಟ್ ಎಂದಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಸಭೆಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು 2002ರಿಂದಲೂ ರಾಜಕೀಯದಲ್ಲಿದ್ದೇನೆ, ಪ್ರದೀಪ್ ಈಶ್ವರ್‌ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ರಾಜಕೀಯ ಮೆಚ್ಯುರಿಟಿಗಾಗಿ ನನ್ನ ಬಳಿ ಟ್ಯೂಶನ್‌ಗೆ ಬರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಂಸದ ಚುನಾವಣೆವರೆಗೂ ಫೇಸ್ ಮಾಡಿದ್ದೇನೆ. ಪ್ರದೀಪ್ ಈಶ್ವರ್‌ನಂತಹ ರಾಜಕೀಯ ಅನನುಭವಿಯಿಂದ ನನಗೆ ಕಲಿಯೋದು ಏನಿದೆ? ಅವನೊಬ್ಬ ಎರಡನೇ ಹುಚ್ಚ ವೆಂಕಟ್, ಲಬಾ ಲಬಾ ಅಂತ ಬಾಯಿ ಬಡ್ಕೋತಾನೆ. ಮಕ್ಕಳಿಗೆ ಪಾಠ ಮಾಡಿ ಬಾಯಿ ಬಡ್ಕೋಳೋದಲ್ಲ, ನನ್ನತ್ರ ಟ್ಯೂಷನ್‌ಗೆ ಬರಲಿ ಎಂದು ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಚೈಲ್ಡ್ ಆರ್ಟಿಸ್ಟ್ ಎಂದಿದ್ದ ಪ್ರದೀಪ್ ಈಶ್ವರ್ : ಶುಕ್ರವಾರ ಬಿಜೆಪಿ ಸಂಸದ ಮುನಿಸ್ವಾಮಿ ವಿರುದ್ಧ ಕಿಡಿಕಾರಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಸಂಸದ ಮುನಿಸ್ವಾಮಿ ಒಂದು ರೀತಿ ಚೈಲ್ಡ್ ಆರ್ಟಿಸ್ಟ್ ಇದ್ದಂಗೆ. ಮುನಿಸ್ವಾಮಿ ಅಲ್ಲ ಅವರು ‘ಮನಿ’ಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ. ನಾನು ಅವರನ್ನು ಮುನಿಸ್ವಾಮಿ ಎಂದುಕೊಂಡಿದ್ದೆ. ‘ಮನಿ’ಸ್ವಾಮಿ ಎಂಬುದು ಈಗ ಗೊತ್ತಾಯಿತು. ಚಿಂತಾಮಣಿ ಹಾಗೂ ಕೋಲಾರದ ಪ್ರಭಾವಿ ನಾಯಕರು ಮನಸ್ಸು ಮಾಡಿಲ್ಲದಿದ್ದರೆ ಅವರು ಹೇಗೆ ಸಂಸದರಾಗುತ್ತಿದ್ದರು ಎಂದು ಪ್ರಶ್ನಿಸಿದರು. ಅವರು ಒಂದು ರೀತಿ ಚೈಲ್ಡ್ ಆರ್ಟಿಸ್ಟ್ ಇದ್ದಂತೆ. ಒಬ್ಬ ಸಂಸದ ಹೇಗೆ ಇರಬೇಕು ಎನ್ನುವುದು ಗೊತ್ತಿಲ್ಲ. ಮುನಿಸ್ವಾಮಣ್ಣ ನನಗೆ ಇನ್ನು 5 ವರ್ಷಕ್ಕೆ ಇರೋದು ಹಬ್ಬ. ನಿಮಗೆ ಮುಂದಿನ ವರ್ಷವೇ ಇದೆ ಹಬ್ಬ. ನೋಡೇ ಬಿಡೋಣ,’’ ಎಂದು ಸವಾಲು ಹಾಕಿದ್ದರು.
ಪ್ರತಾಪ್ ಸಿಂಹ ವಿರುದ್ಧವೂ ಕಿಡಿಕಾರಿದ್ದ ಶಾಸಕ : ಮಾನ್ಯ ಪ್ರತಾಪ್ ಸಿಂಹ ಅವರೇ, ನೀವು ಪತ್ರಕರ್ತರಾಗಿದ್ದಾಗ ಸ್ವಲ ಓದುತ್ತಿದ್ದೀರಿ. ಸಂಸದರಾದ ಮೇಲೆ ಓದೋದು ಬಿಟ್ಟು ಬಿಟ್ಟಿದ್ದೀರಿ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಒಂದು ಗೋಡೌನ್ ಇದ್ದಂಗೆ ಎಂದು ಹೇಳ್ತಿರಲ್ಲ, ನಿಮಗೇನಾದರೂ ತಲೆಗಿಲೆ ಕೆಟ್ಟಿದೆಯಾ? ತಾಕತ್ತಿದ್ದರೆ ಎಫ್‌ಸಿಐ ಬಗ್ಗೆ ಚರ್ಚೆಗೆ ಬನ್ನಿ ಎಂದು ಪ್ರದೀಪ್ ಈಶ್ವರ್ ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿದ್ದರು.
ಟಿ.ನರಸೀಪುರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ನಡೆದಿದೆ. ಕಳೆದ…
ಮೈಸೂರು: ಎಂಎಲ್‌ಸಿ ಸ್ಥಾನಕ್ಕಾಗಿ ರಕ್ತದಲ್ಲಿ ಸಹಿ ಮಾಡಿ ಮನವಿ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬರು ತಮ್ಮ…
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…
ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…