ಮೈಸೂರು: ಜೂ. 21ರಂದು ನಗರದಲ್ಲಿ ನಡೆಯಲಿರುವ ವಿಶ್ವಯೋಗ ದಿನಾಚರಣೆ ಅಂಗವಾಗಿ ಜೂ.12ರಂದು ಯೋಗ ತಾಲೀಮು ನಡೆದಿದ್ದು, ಈ ವೇಳೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ರಾಮದಾಸ್ ನಡುವೆ ಜಟಾಪಟಿ ನಡೆದಿದೆ.
ನರೇಂದ್ರ ಮೋದಿ ಅವರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಪೂರ್ವಭಾವಿ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಇದರ ಭಾಗವಾಗಿಯೇ ಜೂ.12ರ ಭಾನುವಾರ ಅರಮನೆ ಮೈದಾನದಲ್ಲಿ ಯೋಗ ತಾಲೀಮು ಕಾರ್ಯಕ್ರಮ ನಡೆಯಿತು. ಇದಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಪ್ರತಾಪ್ ಸಿಂಹ ಅವರು, ಯೋಗದಲ್ಲಿ 7ರಿಂದ 8 ಸಾವಿರ ಜನರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಶಾಸಕ ರಾಮದಾಸ್ ಅವರು, ಈಗಾಗಲೇ 13 ಸಾವಿರ ನೋಂದಣಿ ಆಗಿದೆ ಎಂದು ಹೇಳಿದರು. ಇದರಿಂದ ಸಿಡಿಮಿಡಿಗೊಂಡ ಪ್ರತಾಪ್ ಸಿಂಹ, ನಾನು ಮಾತನಾಡುತ್ತಿದ್ದೇನೆ, ರಾಮದಾಸ್ ಜೀ ಸುಮ್ಮನಿರಬೇಕು ಎಂದು ರಾಮದಾಸ್ ಮಧ್ಯಪ್ರವೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದ ಯೋಗದಿನದ ಆಯೋಜನೆ, ಅದರ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿಯ ನಾಯಕರ ನಡುವೆಯೇ ಪೈಪೋಟಿ ನಡೆದಿದೆ ಎನ್ನುವುದು ಬಹಿರಂಗವಾಗಿದೆ. ಇಡೀ ಕಾರ್ಯಕ್ರಮ ನನ್ನ ಉಸ್ತುವಾರಿಯಲ್ಲಿಯೇ ಆಗಬೇಕು. ಮೋದಿ ಅವರು ಬರುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದು, ಅದರ ಪೂರ್ಣ ಶ್ರೇಯ ನನಗೇ ಸೇರಬೇಕು ಎನ್ನುವ ತುಡಿತದಲ್ಲಿ ಪ್ರತಾಪ್ ಸಿಂಹ ಅವರು ಇದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದು, ಶಾಸಕ, ಹಿರಿಯ ನಾಯಕ ರಾಮ್ದಾಸ್ ಕೂಡ ಇದೇ ಹಾದಿಯಲ್ಲಿ ಇದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ಇದಾದ ಬಳಿಕ ಪತ್ರಕರ್ತರ ಜೊತೆ ರಾಮದಾದ್ ಮಾತನಾಡಿ, ಪ್ರತಾಪ್ ಸಿಂಹ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಸ್ಪಷ್ಟನೆ ನೀಡಲು ಯತ್ನಿಸಿದೆ ಅಷ್ಟೇ. ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಜಟಾಪಟಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಕಬಿನಿ ಶಕ್ತಿಮಾನ್ ಖ್ಯಾತಿಯ ‘ಭೋಗೇಶ್ವರ’ ಆನೆ ಇನ್ನಿಲ್ಲ