ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಪೊಲೀಸ್‌ ಪೇದೆ ಸಾವು

ಹುಣಸೂರು: ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಗಣೇಶ್ (32) ಬುಧವಾರ ಹೃದಯಾಘಾತದಿಂದ ನಿಧನರಾದರು.

ಪತ್ನಿ ಹಾಗೂ ಅಪಾರ ಬಂಧು-ಬಳವನ್ನು ಅಗಲಿರುವ ಇವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಕುಶಾಲನಗರದ ಬೈಲಕುಪ್ಪೆ ಗ್ರಾಮದ ಅವರ ಜಮೀನಿನಲ್ಲಿ ಬುಧವಾರ ನೆರವೇರಿತು.

× Chat with us