ಕೇಂದ್ರ ನೀಡಿದ ವೆಂಟಿಲೇಟರ್‌ ಅಳವಡಿಕೆ, ಕಾರ್ಯಾಚರಣೆ ಲೆಕ್ಕಪರಿಶೋಧನೆಗೆ ಪ್ರಧಾನಿ ಆದೇಶ

ಹೊಸದಿಲ್ಲಿ: ದೇಶದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಒದಗಿಸಿರುವ ವೆಂಟಿಲೇಟರ್‌ಗಳ ಅಳವಡಿಕೆ, ಕಾರ್ಯಾಚರಣೆ ಬಗ್ಗೆ ಲೆಕ್ಕಪರಿಶೋಧನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆದೇಶ ಹೊರಡಿಸಿದ್ದಾರೆ.

ಕೋವಿಡ್‌ ಪರಿಸ್ಥಿತಿ, ಲಸಿಕೆ ಅಭಿಯಾನ ಕುರಿತು ನರೇಂದ್ರ ಮೋದಿ ಅವರು ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದರು. ಕಂಟೈನ್‌ಮೆಂಟ್‌ ತಂತ್ರಗಾರಿಕೆ, ಪರೀಕ್ಷೆ ಪ್ರಮಾಣದ ಅಗತ್ಯತೆ, ಆರೋಗ್ಯ ಆರೈಕೆ ಸಂಪನ್ಮೂಲಕ್ಕೆ ಆದ್ಯತೆ, ಗ್ರಾಮೀಣ ಭಾಗಗಳಿಗೆ ಆಮ್ಲಜನಕ ಪೂರೈಕೆ ಮೊದಲಾದ ವಿಷಯಗಳ ಕುರಿತು ಚರ್ಚಿಸಿದರು.

ಕೆಲವು ರಾಜ್ಯಗಳಲ್ಲಿ ವೆಂಟಿಲೇಟರ್‌ಗಳನ್ನು ಚಿಕಿತ್ಸೆಗೆ ಬಳಸುತ್ತಿಲ್ಲ ಎಂಬ ಆರೋಪಗಳಿದ್ದು, ಈ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಎಂದು ಮೋದಿ ಸಲಹೆ ನೀಡಿದರು.

ಕೋವಿಡ್‌ ಎರಡನೇ ಅಲೆ ಗ್ರಾಮೀಣ ಭಾಗಗಳಿಗೆ ಹೆಚ್ಚು ಹೊಡೆತ ನೀಡಿದೆ. ಹೀಗಾಗಿ, ಈ ಭಾಗಗಳಿಗೆ ಆಮ್ಲಜನಕ ಪೂರೈಕೆಯನ್ನು ತ್ವರಿತಗೊಳಿಸಬೇಕು ಎಂದು ತಿಳಿಸಿದರು.

× Chat with us