ವಿಶ್ವ ಸಿಂಹ ದಿನ| ದೇಶದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಿದೆ- ಪ್ರಧಾನಿ ಮೋದಿ ಸಂತಸ

ಹೊಸದಿಲ್ಲಿ:ಇಂದು (ಆ.10) ವಿಶ್ವ ಸಿಂಹ ದಿನ. ಈ ಸಂದರ್ಭದಲ್ಲಿ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಸಿಂಹ ಗಾಂಭೀರ್ಯ ಮತ್ತು ಧೈರ್ಯಶಾಲಿ ಪ್ರಾಣಿ. ಭಾರತವು ಏಷ್ಯಾ ಸಿಂಹಗಳ ತವರೂರು ಎಂಬ ಹೆಗ್ಗಳಿಕೆ ಪಡೆದಿದೆ ಎಂದು ತಿಳಿಸಿದ್ದಾರೆ.

ಸಿಂಹ ಸಂರಕ್ಷಣೆಯ ಬಗ್ಗೆ ಉತ್ಸುಕವಾಗಿರುವ ಎಲ್ಲರಿಗೂ ನಾನು ಶುಭಾಶಯ ಕೋರುತ್ತೇನೆ. ಕೆಲವು ವರ್ಷಗಳಿಂದ ನಮ್ಮ ದೇಶದಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿರುವುದು ಸಂತಸದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಸಿಂಹಗಳ ರಕ್ಷಣೆ ಮತ್ತು ಭದ್ರತೆಗಾಗಿ ಪ್ರತಿವರ್ಷ ಆಗಸ್ಟ್ ೧೦ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ.

× Chat with us